
ಸಿಂಧನೂರು : ಆಂಧ್ರಪ್ರದೇಶದಲ ಆಡಳಿತಾರೂಢ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಅಕ್ರಮವಾಗಿ ಬಂಧನ ಮಾಡಿದ್ದಾರೆ. ಯಾವುದೇ ಸಾಕ್ಷಾಧಾರಗಳಲ್ಲದೆ, ವಿನಾಕಾರಣ ಕಾನೂನು ಮೀರಿ ಬಂಧಿಸಲಾಗಿದೆ. ಹಾಗಾಗಿ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ, ಈ ಒಂದು ಸರ್ಕಾರವನ್ನ ರದ್ದು ಮಾಡಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಒತ್ತಾಯಿಸಿ ಎಂದು ಸಿಂಧನೂರಿನಲ್ಲಿ ತೆಲುಗು ಭಾಷಿಕರಿಂದ ಪ್ರತಿಭಟನೆ ಮಾಡಿ ಅಸಮಾಧಾನ ವ್ಯಕ್ತಪಡಿಸಲಾಯಿತು.
ಸಿಂಧನೂರು ನಗರದ ಮತ್ತು ತಾಲೂಕಿನಲ್ಲಿ ವಾಸವಾಗಿರುವ ತೆಲುಗು ವಾಸಿಗಳು ಎಲ್ಲರೂ ಸೇರಿ, ಇಂದು ಆಂಧ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿ, ತಾಲೂಕು ಕ್ರೀಡಾಂಗಣದಿಂದ ತಹಸಿಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಮಾಡಿದರು. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಯಾವುದೇ ಆಧಾರ ಮತ್ತು ನೋಟಿಸ್ ನೀಡದೆ ಬಂಧನ ಮಾಡಿರುವುದು ಖಂಡನೀಯ, ಸದ್ಯ ಆಂಧ್ರಪ್ರದೇಶದಲ್ಲಿ ಸಾಮಾನ್ಯ ವ್ಯಕ್ತಿ ಜೀವನ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ, ಒಂದು ಅಲ್ಲಿನ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡಬೇಕು. ಸತ್ಯ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ನಮ್ಮನ್ನ ಜೈಲಿಗೆ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ಜನರು ಮತ್ತೆ ಸಹಜ ಸ್ಥಿತಿಯಾಗಿ ಜೀವನ ಮಾಡುವಂತೆ ಆಗಬೇಕಾಗಿದೆ. ಹಾಗಾಗಿ ಚಂದ್ರಬಾಬು ನಾಯ್ಡು ಅವರನ್ನ ಕೂಡಲೇ ಬಂಧನ ಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
![]() |
![]() |
![]() |
![]() |
![]() |
[ays_poll id=3]