This is the title of the web page
This is the title of the web page
Politics NewsVideo News

ಪಕ್ಷದ ತತ್ವ ಸಿದ್ಧಾಂತಕ್ಕೆ ದಕ್ಕೆ ಬಂದ್ರೆ ಕಿವಿ ಹಿಡಿದು ಹೊರಗೆ ಹಾಕ್ತಾರೆ : ಬಿ‌ವಿ ನಾಯಕ್ ಗೆ ಟಾಂಗ್..


K2kannadanews.in

Political News ರಾಯಚೂರು : ಪಕ್ಷದ ತತ್ವ ಸಿದ್ಧಾಂತ (principle theory), ಮುಖಂಡರಿಗೆ ಧಕ್ಕೆ ಬರುವಂತೆ ನಡೆದುಕೊಂಡರೆ, ಯಾರೇ ಆಗಲಿ ಕಿವಿ ಹಿಡಿದು (throwsout from party) ಹೊರ ಹಾಕುತ್ತಾರೆ ಎಂದು ಬಿಜೆಪಿ (BJP) ಅಭ್ಯರ್ಥಿ ರಾಜ ಅಮರೇಶ್ವರ್ ನಾಯಕ್ ಪರೋಕ್ಷವಾಗಿ ಬಿ ವಿ ನಾಯಕ ಅವರಿಗೆ ಟಾಂಗ ನೀಡಿದ್ದಾರೆ.

ಹೌದು ಮಾಧ್ಯಮದೊಂದಿಗೆ (Media) ಮಾತನಾಡಿದ ಅವರು, 35 ವರ್ಷಗಳಿಂದ (Years) ನಾನು ರಾಜಕೀಯದಲ್ಲಿ ಇದ್ದೇನೆ. ಯಾವುದೇ ರಾಜಕೀಯ ಪಕ್ಷ (Political party) ಒಮ್ಮೆ ಸಭೆ (Meeting) ಮಾಡಿ , ಅಂತಿಮ ಮಾಡಿದ ಹೆಸರನ್ನ (name) ಬದಲಾವಣೆ ಮಾಡುವುದು ಸಾಧ್ಯವಿಲ್ಲ. ಕೆಲವರಿಗೆ ಮಾಹಿತಿ ಕೊರತೆ ಇದೆ, ಹಾಗಾಗಿ ಪಕ್ಷದಲ್ಲಿ ಗೊಂದಲಗಳನ್ನು ಸೃಷ್ಟಿ (Creating Problem) ಮಾಡುತ್ತಿದ್ದಾರೆ. ನಾನು ಈಗಾಗಲೇ ಹೈಕಮಾಂಡ್ (Highcomand) ಗಮನಕ್ಕೆ ತಂದಿದ್ದೇನೆ. ನಾನು ಯಾಕೆ ಸುಮ್ಮನಿದ್ದೇನೆ ಎಂದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂದು. ಇದರಲ್ಲಿ ಜಿಲ್ಲಾಧ್ಯಕ್ಷರ (District present) ಪಾತ್ರ ಮುಖ್ಯವಾಗಿದೆ. ಇದೇರೀತಿ ಜಿಲ್ಲಾಧ್ಯಕ್ಷರು ಮುಂದುವರೆದರೆ ಕಷ್ಟ ಆಗುತ್ತೆ. ಅವರೊಂದಿಗೆ ಮಾತನಾಡಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಇಂತಹ ಗೊಂದಲಕ್ಕೆ ಅವಕಾಶ ಕೊಡಬಾರದು ಎಂಬ ಹೇಳಿಕೆ ಮತ್ತು ದೂರನ್ನು ವರಿಷ್ಟರಿಗೆ ನೀಡಿದ್ದೇನೆ.

13ನೇ ತಾರೀಕಿಗೆ ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ (Election incharge) ಅಗರ್ವಾಲ್ ಅವರು ಬರುತ್ತಿದ್ದಾರೆ ಅಂದು ಎಲ್ಲಾ ಸಮಸ್ಯೆ ಬಗೆ ಹರಿಯುತ್ತದೆ. ರಾಜ್ಯ ಉಸ್ತುವಾರಿಯವರು ಈಗಾಗಲೇ ನಿರ್ದೇಶನ (Instructions) ಕೊಟ್ಟಿದ್ದಾರೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು. ಅದಕ್ಕೆ ಧಕ್ಕೆ ಬರುವಂತೆ ನಡೆದುಕೊಂಡರೆ, ಪಕ್ಷಕ್ಕೆ, ಮುಖಂಡರಿಗೆ ಧಕ್ಕೆ ಬರುವಂತೆ ನಡೆದುಕೊಂಡರೆ ಕಿವಿ ಹಿಡಿದು ಹೊರ ಹಾಕುತ್ತಾರೆ. 13 ರಂದು ನಡೆಯುವ ಸಭೆಯಲ್ಲಿ ಇದು ಮುಂದುವರೆದರೆ, ಕಿವಿ ಹಿಡಿದು ಹೊರಗೆ ಹಾಕುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.


[ays_poll id=3]