
ಸಿರವಾರ : ರೈತರಿಗೆ ಉಪಯೋಗವಾಗಬೇಕಿದ್ದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ, ಅಕ್ರಮ ಜರುಗಿದ್ದು ಖಾತ್ರಿ ಆಗಿದೆ. 51 ಜನ ರೈತರ ಹೆಸರಲ್ಲಿ ಫಸಲ್ ಬಿಮಾ ಯೋಜನೆಯ 53.78 ಲಕ್ಷ ಹಣ ಡ್ರಾ ಮಾಡಿರುವ ಪ್ರಕರಣದ ಹೆಚ್ಚಿನ ತನಿಖೆಯನ್ನು CIDಗೆ ಹಸ್ತಾಂತರಿಸಲಾಗಿದೆ.
ಹೌದು 51 ರೈತರ ಹೆಸರಿನಲ್ಲಿ ಅಕ್ರಮವಾಗಿ ಫಸಲ್ ಬಿಮಾ ಯೋಜನೆಯಲ್ಲಿ ಹೆಸರು ನೊಂದಾಯಿಸಿ ವಿಮಾ ಕಂತು ಜಮಾ ಮಾಡಿ 15 ಜನರು ತಮ್ಮ ಬ್ಯಾಂಕ್ ಖಾತೆ ನೀಡಿ ಹಣ ಪಡೆದುಕೊಂಡು ಸರ್ಕಾರಕ್ಕೆ ಮತ್ತು ರೈತರಿಗೆ ವಂಚಿಸಿದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನ ಸಣ್ಣ ಹೊಸೂರು ಮತ್ತು ಮಾಡಗಿರಿ ಗ್ರಾಮಗಳ 51 ಜನ ರೈತರ ಹೆಸರಿನಲ್ಲಿ ಬೇರೆ 15 ಜನಕ್ಕೆ ವಿಮಾ ಹಣ ಜಮಾ ಆಗಿದ್ದು, 15 ಜನ ವಂಚಕರು 2022 ರ ಜುಲೈ ಮತ್ತು ಆಗಸ್ಟ್‌ನಲ್ಲಿ ರೈತರ ಹೆಸರಿನಲ್ಲಿ ಸಿರವಾರದಲ್ಲಿ ವಿಮೆ ಮೊತ್ತವನ್ನು ಭರ್ತಿ ಮಾಡಿ, ಮುಂಗಾರು ವಿಮಾ ಮೊತ್ತ 53.78 ಲಕ್ಷ ಹಣವನ್ನು ಬ್ಯಾಂಕ್‌ನಿಂದ 2023 ಏ 12ರಂದು ಡ್ರಾ ಮಾಡಿಕೊಂಡಿದ್ದಾರೆ. ರೈತರ ದೂರಿನಡಿ ಪರಿಶೀಲನೆ ನಡೆಸಿದಾಗ ಬೇರೆಯವರ ಖಾತೆಗೆ ಹಣ ಜಮಾ ಆಗಿರುವ ಅಕ್ರಮ ಹೊರಬಿದ್ದಿದ್ದು, ರೈತರ ದೂರಿನಂತೆ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ 15 ಜನರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈರೇಶ ಮದ್ಲಾಪುರ 4.34 ಲಕ್ಷ, ಅಮರೇಶ ಚೀಕಲಪರ್ವಿ 4.31 ಲಕ್ಷ, ಶಂಕ್ರಪ್ಪ ಜಾಗೀರಪನ್ನೂರು 4.21 ಲಕ್ಷ, ಅಶೋಕ ಮದ್ಲಾಪುರ 4 ಲಕ್ಷ, ಶಿವನಪ್ಪ ಮದ್ಲಾಪುರ 3.99 ಲಕ್ಷ, ಲಿಂಗರಾಜ 3.94 ಲಕ್ಷ,
ಬಸವರಾಜ 3.89 ಲಕ್ಷ, ಅರುಣಕುಮಾರ ಜಾಗೀರಪನ್ನೂರು 3.83 ಲಕ್ಷ, ಯಲ್ಲಮ್ಮ ಮದ್ಲಾಪುರ 3.28 ಲಕ್ಷ, ಕೆ.ಸತ್ಯವತಿ 3.38 ಲಕ್ಷ, ನಾಗರಾಜ ಹೊಸೂರು 2.29 ಲಕ್ಷ, ವೆಂಕಟೇಶ ಸಿರವಾರ 3.23 ಲಕ್ಷ , ಭಾಗಮ್ಮ 98 ಸಾವಿರ, ಯಲ್ಲಪ್ಪ 1.53 ಲಕ್ಷ , ಗೀತಾ ಅವರ ಹೆಸರಿನಲ್ಲಿ 2.52 ಲಕ್ಷ ಸೇರಿ ಒಟ್ಟು 53.78 ಲಕ್ಷ ಅಕ್ರಮವಾಗಿ ಜಮಾ ಆಗಿದೆ ಎಂದು ಮಾನ್ವಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹುಸೇನ್ ಸಾಬ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
![]() |
![]() |
![]() |
![]() |
![]() |
[ays_poll id=3]