This is the title of the web page
This is the title of the web page
State News

ವಿದ್ಯುತ್ ಶುಲ್ಕ : ಯುನಿಟ್ ಗೆ 60 ಪೈಸೆವರೆಗೆ ಹೆಚ್ಚಳ..?


K2kannadanews.in

News Desk : ರಾಜ್ಯದ ಜನತೆಗೆ ಕೆಲವೇ ದಿನಗಳಲ್ಲಿ ವಿದ್ಯುತ್ ಬೆಲೆ (power price hike) ಹೆಚ್ಚಳ ಶಾಕ್ ಹೊಡೆಯಲಿದೆ. ಪ್ರತಿ ಯುನಿಟ್ (Unit) ಗೆ 50 ರಿಂದ 60 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (power control commotion) ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗ ಒಪ್ಪಿದರೆ ಏಪ್ರಿಲ್ 1ರಿಂದ ದರ ಹೆಚ್ಚಳ ಆಗಲಿದೆ.

ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (power supply company) ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ. ಡಿಸೆಂಬರ್ (Dismember) ಕೊನೆಯ ವಾರ ಬೆಸ್ಕಾಂನಿಂದ ಯುನಿಟ್ ಗೆ 49 ಪೈಸೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಬೆಸ್ಕಾಂ ಮತ್ತು ಗ್ರಾಹಕರಿಗೆ ಹೊರೆಯಾಗದ ರೀತಿ ದರ ಪರಿಷ್ಕರಣೆ ಮಾಡಲು ಕೆಇಆರ್‌ಸಿ ಮುಂದಾಗಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಿದೆ.

ಅದೇ ರೀತಿ ಮೆಸ್ಕಾಂ, ಸೆಸ್ಕ್, ಹೆಸ್ಕಾಂ, ಚೆಸ್ಕಾಂ ಕೂಡ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆತಷ್ಟು ದರ ಪರಿಷ್ಕರಣೆಗೆ ಮನವಿ ಮಾಡಿವೆ ಎಂದು ಹೇಳಲಾಗಿದೆ. ಕಲ್ಲಿದ್ದಲು, ವಿದ್ಯುತ್ ಖರೀದಿ, ಸರಬರಾಜು ವೆಚ್ಚ ಮೊದಲಾದ ಕಾರಣಗಳಿಂದ ನಿರ್ವಹಣೆ ಹೊರೆಯಾಗುತ್ತಿದ್ದು, ನಷ್ಟ ಸರಿದೂಗಿಸಲು 2024 -25 ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆಗೆ ಮನವಿ ಮಾಡಲಾಗಿದೆ.


[ays_poll id=3]