This is the title of the web page
This is the title of the web page
Crime NewsLocal News

ನಕಲಿ ನೋಟಿನ ಹಾವಳಿ : ಬೇಸತ್ತ ಹಟ್ಟಿ ಪಟ್ಟಣ ಜನ..


K2kannadanews.in

Fack Notes ಹಟ್ಟಿ ಚಿನ್ನದಗಣಿ : ಸಣ್ಣ ವ್ಯಾಪಾರಸ್ಥರ (small business) ಹೊಟ್ಟೆ ಮೇಲೆ ಹೊಡೆಯುತ್ತಿವೆ. ದಿನಕ್ಕೆ ದುಡಿಯುವುದೇ 400 ರಿಂದ 500. ಅದರಲ್ಲಿ ಒಂದು ಖೋಟಾನೋಟು (Fack Notes) ಬಂದರೆ ಏನು ಮಾಡೋದು ಅನ್ನೋ ಅಳಲು ಹಟ್ಟಿ ಪಟ್ಟಣದ (Hatti town) ವ್ಯಾಪಾರಸ್ಧರ ಮತ್ತು ಬಡ ಜನರ ಪ್ರಶ್ನೆಯಾಗಿದೆ (Questions).

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಮಿತಿಮೀರಿ ಹೋಗಿದೆ. ತರಕಾರಿ & ಕಿರಾಣಿ ವ್ಯಾಪಾರಸ್ಧರು ಮತ್ತು ಪಿಗ್ಮಿ ಕಲೆಕ್ಷನ್ ಮಾಡುವ ಹುಡುಗರ ಹತ್ತಿರ ನೋಟುಗಳು ಪತ್ತೆಯಾಗಿದ್ದು, ಈ ಕೋಟಾ ನೋಟು ಬಗ್ಗೆ ಇಲ್ಲಿನ ವ್ಯಾಪಾರಸ್ಧರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಜನದಟ್ಟಣೆಯ ಪ್ರದೇಶಗಳನ್ನೇ (Crowded aeria) ಗುರಿಯಾಗಿಸಿಕೊಂಡು ಖೋಟಾ ನೋಟುಗಳನ್ನು ಅಕ್ರಮವಾಗಿ (Illegal) ಚಲಾಚಣೆ ಮಾಡುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ (Take action) ಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ಸಣ್ಣ, ಪುಟ್ಟ ವ್ಯಾಪಾರಸ್ಧರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತ ನಕಲಿ ನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ (Police department) ನಿಗಾ ಇರಿಸಲಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎನ್ನುತ್ತಾರೆ ಪೊಲೀಸರು.


[ays_poll id=3]