LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಾಯಾದಿಗಳಿಂದ ಹಲ್ಲೆಗೊಳಗಾಗಿದ್ದ ಶಿವಣ್ಣ ಚಿಕಿತ್ಸೆ ಫಲಿಸದೆ ಸಾವು..

ಆಸ್ಪತ್ರೆ ಮುಂದೆ ಪತ್ನಿ, ಕುಟುಂಬಸ್ಥರ ಆಕ್ರಂದನ..

ದೇವದುರ್ಗ : ಆರು ಎಕರೆ ಜಮೀನು ವಿವಾದಕ್ಕಾಗಿ ದಾಯಾದಿಗಳು ನಡೆಸಿದ ಮಾರಣಾಂತಿಕ ಹಲ್ಲೆಗೆ ಕೊನೆಗೂ ಒಂದು ಜೀವ ಬಲಿಯಾಗಿದೆ. 

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮ್ಯಾದರಗೋಳ ಗ್ರಾಮದಲ್ಲಿ ನಡೆದಿದ್ದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶಿವಣ್ಣ ಎಂಬುವವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲ್ಲೆಗೊಳಗಾದ ಮತ್ತೊಬ್ಬ ಸಂತ್ರಸ್ತ ಬಸನಗೌಡ ಎಂಬುವವರ ಸ್ಥಿತಿ ಇನ್ನು ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಖಾರದ ಪುಡಿ ಎರಚಿ ಕ್ರೂರ ಹಲ್ಲೆ :

ದಾಯಾದಿಗಳಾದ ಭೀಮರಾಯ, ರಂಗಪ್ಪ, ನಾಗರಾಜ, ಹನುಮಗೌಡ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು, ಕಲ್ಲು ಹಾಗೂ ದೊಣ್ಣೆಗಳಿಂದ ಈ ಇಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಕುಟುಂಬಸ್ಥರ ಆಕ್ರೋಶ ಮತ್ತು ಅಸಮಾಧಾನ :

ಆಆರೋಪಿಗಳು ಮಚ್ಚು ಮತ್ತು ಕೊಡಲಿಯಿಂದಲೇ ಹಲ್ಲೆ ನಡೆಸಿದ್ದರೂ, ಪೊಲೀಸರು ಎಫ್‌ಐಆರ್‌ನಲ್ಲಿ (FIR) ಈ ಮಾರಕಾಸ್ತ್ರಗಳ ಉಲ್ಲೇಖವನ್ನೇ ಮಾಡಿಲ್ಲ" ಎಂದು ಮೃತರ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪತ್ನಿ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..