ರಾಯಚೂರು : ರಾಜ್ಯದಲ್ಲಿ ಈ ಹಿಂದೆ ಮಧ್ಯದ ಅಂಗಡಿಗಳ ಲೈಸನ್ಸ್ ವಿಚಾರವಾಗಿ ಭಾರಿ ಸದ್ದು ಮಾಡಿತ್ತು. ರಾಜ್ಯದಲ್ಲಿ ಅದೆಷ್ಟೋ ಬಾರ್ ಗಳು ರಿನಿವಲ್ ಆಗದೆ, ವಾಣಿಜ್ಯ ಅಲ್ಲದ ನಿವೇಶನಗಳಲ್ಲಿ ಅನಧಿಕೃತ ಬಾರ್ ಮತ್ತು ರೆಸ್ಟೋರೆಂಟ್ ಗಳು ನಡೆಯುತ್ತಿವೆ. ರಾಯಚೂರು ತಾಲ್ಲೂಕಿನಲ್ಲೂ ಇಂತಹ ಅನಧಿಕೃತ ಬಾರ್ ಗಳಿವೆ ಎಂಬುದು ಗಮನಾರ್ಹ. ವಿಪರ್ಯಾಸ ಎಂದರೆ ಗಿಲ್ಲೆಸುಗೂರು ಗ್ರಾಮದಲ್ಲಿ ಒಂದು ಬಾರ್ ರೆಸ್ಟೋರೆಂಟ್ ಇದೆ ಇದರ ಮಾಲಿಕರು ಓರ್ವ BPL ಪಡಿತರ ಚೀಟಿದಾರರು.
ಹೌದು ನಂಬಲಸಾಧ್ಯವಾದರು ನಂಬಲೇ ಬೇಕು, ರಾಯಚೂರು ತಾಲೂಕಿನ ಗಿಲ್ಲೆಸುಗೂರು ಗ್ರಾಮದಲ್ಲಿ ನಿವೇಶನಕ್ಕೆ ಇದ್ದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ವಿಜಯಲಕ್ಷ್ಮಿ ಲಾಡ್ಜಿಂಗ್ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲಾಗುತ್ತಿದೆ. ವಿಶೇಷ ಎಂದರೆ ಈ ಒಂದು ಬಾರ್ ಲೈಸೆನ್ಸ್ ಪಡೆದಿರುವ ಮಹಿಳೆಯ ಹೆಸರು ವಿಜಯಲಕ್ಷ್ಮಿ ಗಂಡ ನಾಗರಾಜ್ ನಾಯಕ್. ಇವರ ಹೆಸರಿನಲ್ಲಿ ಒಂದು ಬಿಪಿಎಲ್ ಪಡಿತರ ಚೀಟಿ ಇದೆ. ಸರ್ಕಾರದ ದಾಖಲೆಗಳಲ್ಲಿ ಇವರು ಕಡುಬಡತನದವರು. ಅಬಕಾರಿ ಇಲಾಖೆಯಲ್ಲಿ ಇವರು ಒಂದು ಬಾರ್ ನ ಮಾಲೀಕರು. ಮೊದಲ ಹಂತದಲ್ಲಿಯೇ ಇವರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ.
ಎರಡನೆಯದಾಗಿ ಇವರು ನಡೆಸುತ್ತಿರುವ ಲಾಡ್ಜ್ ಬಾರ್ ಅಂಡ್ ರೆಸ್ಟೋರೆಂಟ್ ಇರುವ ಜಾಗ ನಿವೇಶನಕ್ಕಾಗಿ ಮೀಸಲಿಟ್ಟಿದ್ದು ಆ ಒಂದು ಸ್ಥಳದಲ್ಲಿ ಮನೆ ನಿರ್ಮಾಣ ಮಾಡಬೇಕು ಆದರೆ ಇವರು ವಾಣಿಜ್ಯ ಕೆಲಸಕ್ಕೆ ಬಳಸಿಕೊಂಡು ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲಾಗುತ್ತಿದೆ ಇದು ಕೂಡ ನಿಯಮಬಾಹಿರವಾಗಿದೆ. ಈ ಒಂದು ಕಟ್ಟಡದ ಬಗ್ಗೆ ಅಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ಅವರು ಹಿಂಬರ ಕೊಡುವುದು, ಆ ಒಂದು ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಪಂಚಾಯಿತಿಯಲ್ಲಿ ಇಲ್ಲವಂತೆ. ಅಂದರೆ ಪಂಚಾಯಿತಿಯಲ್ಲಿ ಈ ಒಂದು ಕಟ್ಟಡದ ಯಾವುದೇ ದಾಖಲೆಗಳು ನಮೋದು ಮಾಡದೆ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಈ ಒಂದು ಕಟ್ಟಡದ ರಿನಿವಲ್ ಅವಧಿಯು 2025 ರಲ್ಲಿ ಮುಗಿದಿದೆ.
ವಿಜಯಲಕ್ಷ್ಮಿ ಗಂಡ ನಾಗರಾಜ್ ನಾಯಕ್ ಎಂಬುವರ ಬಾರ್ ಅಂಡ್ ರೆಸ್ಟೋರೆಂಟ್ ಇದ್ದು ಅವರಿಗೆ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ನೀಡಿರುವುದು ಎಷ್ಟರಮಟ್ಟಿಗೆ ಸರಿ. ಎರಡು ವರ್ಷಗಳಿಂದ ಬಾರ್ ರಿನಿವಲ್ ಆಗದೇ ಇದ್ದರೂ ಇಂದಿಗೂ ರಾಜಾರೋಶವಾಗಿ ನಡೆಸುತ್ತಿದ್ದರು ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುದ್ದು ಯಾಕೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ,ಸತ್ಯಾಸತ್ತೆತೆಗಾಗಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.