LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..

ಪಂಪ್‌ಸೆಟ್ ಆನ್ ಮಾಡುವಾಗ ವಿದ್ಯುತ್ ಪ್ರವಹಿಸಿ ಸಾವು..

 

 

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ 18 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಗ್ರಾಮದ ಶಿವು (18) ಮೃತ ದುರ್ದೈವಿ.

ಗ್ರಾಮದ ಹೊರವಲಯದಲ್ಲಿರುವ ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಂಪ್‌ಸೆಟ್ ಆನ್ ಮಾಡಲು ಮುಂದಾದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಿವುಗೆ ವಿದ್ಯುತ್ ಶಾಕ್ ಹೊಡೆದಿದೆ. ತೀವ್ರ ವಿದ್ಯುತ್ ಪ್ರಹಾರದಿಂದಾಗಿ ಶಿವು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದು ಜಾಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಮಾಹಿತಿ ಕಲೆಹಾಕಿ, ವಿದ್ಯುತ್ ಶಾಕ್‌ಗೆ ಕಾರಣವೇನು ಎಂಬುದರ ಬಗ್ಗೆ ಪರಿಶೀಲನೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಾಲಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..