https://youtu.be/me_5DbuGlOc?si=PMpd4I1HiynKKdVO
ಅದು ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನು ಹೊದಿದ್ದ ಶೆಡ್ಡು, ರಾತ್ರಿ ಕುರಿಗಳಿಗೆ ಊಟ ಕೊಟ್ಟು, ಮನೆಗೆ ಹೋದ ಮಾಲೀಕ ಬೆಳಿಗ್ಗೆ ಬಂದು ನೋಡಿದಾಗ ಅಷ್ಟು ಕುರಿಗಳು ಬೆಂಕಿಯಲ್ಲಿ ಬೆಂದು ಹೋಗಿದ್ದವು. ಆಕಸ್ಮಿಕವಾಗಿ ಕುರಿ ಸಾಕಾಣಿಕಾ ಕೇಂದ್ರಕ್ಕೆ ಬೆಂಕಿ ಬಿದ್ದು ಕುರಿ, ಶೆಡ್ಡು, ಅಲ್ಲಿದ್ದ ಸೇರಿ ಸುಮಾರು ಎರಡು ಕೋಟಿಗೂ ಅಧಿಕ ಬೆಲೆ ಬಾಳುವ ಸಾಮಾಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.
ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ಕುರಿ ಸಾಕಾಣಿಕೆ ಶೆಡ್‌ನಲ್ಲಿ ಬೆಳಗಿನಜಾವ 2 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿಕೊಂಡು ಶೆಡ್ಡಿನಲ್ಲಿದ್ದ 700ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಕುರಿ ಸಾಕಾಣಿಕೆ ಫಾರಂ ಸಿಂಧನೂರಿನ ಮಧುಸೂದನ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಈ ಒಂದು ಸೇಟಿನಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ಬಳಸಿ ಫ್ಲೋರಿಂಗ್ ಮಾಡಲಾಗಿತ್ತು. ಅಲ್ಲದೇ ಚಡ್ಡಿನ ಸುತ್ತಲೂ ಪ್ಲಾಸ್ಟಿಕ್ ನ ಫೆನ್ಸಿಂಗ್ ಮಾಡಲಾಗಿತ್ತು. ಅಲ್ಲದೇ ಕುರಿಗಳಿಗೆ ಸೊಳ್ಳೆ ಕಾಟ ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ನಿಂದ ಮಾಡಿದ ನೆಟ್ ಹಾಕಲಾಗಿರುತ್ತದೆ. ಬೆಂಕಿ ಹತ್ತಿಕೊಂಡರೆ ಪೆಟ್ರೋಲ್ ರೀತಿಯಲ್ಲೇ ಕ್ಷಣಾರ್ಧದಲ್ಲಿ ವ್ಯಾಪಿಸಿಕೊಂಡಿದೆ. ಅಲ್ಲದೆ ಹುಲ್ಲು ಕೂಡ ಅಲ್ಲೇ ಇದ್ದಿದ್ದು ಮತ್ತಷ್ಟು ಬೆಂಕಿ ಹೆಚ್ಚಾಗಲು ಕಾರಣವಾಗಿ ಕುರಿಗಳಿಗೆ ಹೊರಬರಲು ದಾರಿ ಇಲ್ಲದಂತಾಗಿ ಸುಟ್ಟು ಕರಕಲಾಗಿವೆ ಎನ್ನುತ್ತಾರೆ ಮಾಲೀಕ ಮಧುಸೂದನ್.
ಇನ್ನೂ ಮಾಲಿಕರು ನೀಡಿರುವ ಮಾಹಿತಿ ಪ್ರಕಾರ ಶೆಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಹಾಗೂ ಇತರೆ ಸಾಮಗ್ರಿಗಳು ಇದ್ದುದರಿಂದ ಬೆಂಕಿ ವೇಗವಾಗಿ ಹರಡಿದೆ. ಅಗ್ನಿ ಅವಘಡದಲ್ಲಿ ಮೇವು, ಪ್ಲಾಸ್ಟಿಕ್ ಪೈಪ್, ಟ್ರಾಕ್ಟರ್, ಪಂಪ್ ಸೆಟ್ ಮೋಟರ್, ಪಾರ್ಟಿಲೈಸರ್ ಭಷದಿಗಳು ಸೇರಿ ವಿವಿಧ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಸುಮಾರು 2 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗ್ತಿದೆ. ಬೆಂಕಿ ಹೊತ್ತಿಕೊಂಡಾಗ ಶೆಡ್‌ನಲ್ಲಿ ಇದ್ದ 700ಕ್ಕೂ ಹೆಚ್ಚು ಕುರಿಗಳು ಬೆಂಕಿಗೆ ಬಲಿಯಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಕೇವಲ ಮೂರು ಕುರಿಗಳು ಮಾತ್ರ ತಪ್ಪಿಸಿಕೊಂಡು ಪಾರಾಗಿವೆ. ಇನ್ನು ಗ್ರಾಮದ ವಿವಿಧ ರೈತರು ಮಧುಸೂದನ್ ಅವರಿಗೆ ಆದ ನಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಿ, ನೆರವಿಗೆ ದಾವಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಎರಡು ವಾಹನಗಳು ಆಗಮಿಸಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗ್ನಿ ಅವಘಡದ ನಿಖರ ಕಾರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇರಲಿ ಬೆಂಕಿ ಅನಾಹುತದಿಂದ 700 ಕುರಿಗಳು ಕಳೆದುಕೊಂಡು ರೈತ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.