*ರಾಯಚೂರು ಬ್ರೇಕಿಂಗ್*
KKRTC ಬಸ್ ಚಾಲಕ ಕುಡಿದ ಮತ್ತಿನಲ್ಲಿ ಬಸ್ ಚಾಲನೆ..
ಕುಡಿದ ಮತ್ತಿನಲ್ಲಿದ್ದ ಚಾಲಕನಿಗೆ ಧರ್ಮದೇಟು ನೀಡಿದ ಪ್ರಯಾಣಿಕರು..
ರಾಯಚೂರಿನಿಂದ ಜೂಕೂರಿಗೆ ಹೋಗುತ್ತಿದ್ದ ಒಂದನೇ ಘಟಕಕ್ಕೆ ಸೇರಿದ ಬಸ್..
30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ಸನ್ನು ಕುಡಿದು ಚಾಲನೆ ಚಾಲನೆ ಮಾಡುತ್ತಿದ್ದ ಚಾಲಕ..
ನಾಗಲಾಪೂರ ಗ್ರಾಮದ ಬಳಿಯ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದ ಬಸ್..
ಈ ವೇಳೆ ಬಸ್ ಪಲ್ಟಿ ಆಗುವ ಹಂತಕ್ಕೆ ಹೋಗಿತ್ತು..
ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..
ಈ ವೇಳೆ ಚಾಲಕ ಕಂಠ ಪೂರ್ತಿ ಕುಡಿದ ಘಟನೆ ಬೆಳಕಿಗೆ ಬಂದಿದೆ..
ಕೋಪಗೊಂಡ ಕೆಲ ಪ್ರಯಾಣಿಕರು ಚಾಲಕನಿಗೆ ಥಳಿಸಿದ್ದಾರೆ..
ನಂತರ ಚಾಲನೆ ಗೊತ್ತಿರುವ ಯುವಕನೋರ್ವ ಮಟಮಾರಿ ಗ್ರಾಮದ ವರೆಗೆ ಬಸ್ ಚಾಲನೆ ಮಾಡಿದ್ದಾನೆ..
ಆದರೇ ಜೂಕೂರು ಗ್ರಾಮಕ್ಕೆ ತೆರಳಬೇಕಾದ ಪ್ರಯಾಣಿಕರು ಪರದಾಡಿದ ಘಟನೆ ಜರುಗಿದೆ..