LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ಸತ್ತಿಲ್ಲ, ಇನ್ನೂ ಬದುಕಿದ್ದೇನೆ. ಯಾಕೆ ಹೀಗೆ ಅಳುತ್ತಿದ್ದೀರಿ..?

ಹಟ್ಟಿಯಲ್ಲಿ ಸತ್ತನೆಂದಿದ್ದ ವ್ಯಕ್ತಿ ಕಣ್ಣಿರಿಡುತ್ತಿದ್ದವರ ಮುಂದೆ ಪ್ರತ್ಯಕ್ಷ..

 

 

 

 

ರಾಯಚೂರು ಜಿಲ್ಲೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ತಮ್ಮ ಮನೆಯವರೇ ಎಂದು ಭಾವಿಸಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ, ಸತ್ತನೆಂದು ಭಾವಿಸಿದ್ದ ವ್ಯಕ್ತಿಯೇ ದಿಢೀರ್ ಪ್ರತ್ಯಕ್ಷನಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ ಘಟನೆ ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಪಟ್ಟಣದ ರೋಡಲಬಂಡಾ ಮುಖ್ಯ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಮೃತದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು.

ಇದೇ ವೇಳೆ ಪಟ್ಟಣದಲ್ಲಿ ವಾಸವಾಗಿರುವ ವಂದೆಪ್ಪ ಎಂಬ ವ್ಯಕ್ತಿ ಧರಿಸುತ್ತಿದ್ದ ಬಟ್ಟೆಗಳನ್ನೇ ಮೃತದೇಹವೂ ಧರಿಸಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಕುಟುಂಬಸ್ಥರು ಮೃತಪಟ್ಟಿರುವುದು ವಂದೆಪ್ಪನೇ ಎಂದು ಭಾವಿಸಿದ್ದಾರೆ. ಬಳಿಕ ಮೃತದೇಹದ ಬಳಿ ಜಮಾಯಿಸಿದ ಕುಟುಂಬಸ್ಥರು ತಮ್ಮ ಮನೆಯವರು ಮೃತಪಟ್ಟಿದ್ದಾರೆಂದು ಭಾವಿಸಿ ಕಣ್ಣೀರು ಹಾಕುತ್ತಾ ಗೋಳಾಡಿದ್ದಾರೆ.

ಆದರೆ, ಕೆಲವೇ ಕ್ಷಣಗಳಲ್ಲಿ ಸತ್ತನೆಂದು ಭಾವಿಸಿದ್ದ ವಂದೆಪ್ಪನೇ ಅಲ್ಲಿಗೆ ಪ್ರತ್ಯಕ್ಷನಾಗಿದ್ದಾನೆ. ತನ್ನ ಸಾವಿಗೆ ಕುಟುಂಬಸ್ಥರು ಕಣ್ಣೀರಿಡುತ್ತಿರುವುದನ್ನು ಕಂಡು ದಂಗಾದ ಆತ, 'ನಾನು ಸತ್ತಿಲ್ಲ, ಇನ್ನೂ ಬದುಕಿದ್ದೇನೆ. ಯಾಕೆ ಹೀಗೆ ಅಳುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದವರು ಕ್ಷಣಕಾಲ ಅಚ್ಚರಿಗೊಂಡಿದ್ದಾರೆ.

ಇದೀಗ ಅಪಘಾತದಲ್ಲಿ ಮೃತಪಟ್ಟಿರುವ ಅಪರಿಚಿತ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST