LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಬ್ಲ್ಯಾಕ್‌ಮೇಲ್..

ಗ್ರಾಮೀಣ ಠಾಣೆ ಪೊಲೀಸರಿಂದ ಮೂವರ ಬಂಧನ..

ರಾಯಚೂರು : ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ಹಿಂಬಾಲಿಸಿ ಫೋಟೋ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಮೂವರನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ಘಟನೆ ಜರುಗಿದೆ.

ರಾತ್ರಿ ವೇಳೆ ಸ್ನೇಹಿತರೊಂದಿಗೆ ಡಾಬಾ ಹಾಗೂ ಇತರೆ ಸ್ಥಳಗಳಿಗೆ ತೆರಳುತ್ತಿದ್ದ ವೈದ್ಯಕೀಯ ಜೋಡಿ ವಿದ್ಯಾರ್ಥಿಗಳನ್ನು ಆರೋಪಿಗಳು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಅವರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಮಾತು ಕೇಳದಿದ್ದಾಗ ವಿದ್ಯಾರ್ಥಿಗಳ ಬೈಕ್ ಕೀ ಕಸಿದುಕೊಂಡು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಗಳು ಆರಂಭದಲ್ಲಿ ಓರ್ವ ವಿದ್ಯಾರ್ಥಿಯಿಂದ 30 ಸಾವಿರ ನಗದು ಪಡೆದಿದ್ದು, ನಂತರವೂ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಆನ್‌ಲೈನ್ ಅಥವಾ ಫೋನ್‌ಪೇ ಮೂಲಕ ಹಣ ಪಡೆದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ನಗದು ರೂಪದಲ್ಲೇ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಇಲ್ಲದೇ ಹೋದಲ್ಲಿ ಪೆಟ್ರೋಲ್ ಬಂಕ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸುವ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಬಗ್ಗೆಯೂ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.

ರಾತ್ರಿ ವೇಳೆ ವಾಕಿಂಗ್‌ಗೆ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಜೋಡಿಗಳನ್ನೂ ಗುರಿಯಾಗಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತ ಎಂದು ಗುರುತಿಸಲಾಗಿದ್ದು, ಗ್ರಾಮೀಣ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಚೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಬ್ಲ್ಯಾಕ್‌ಮೇಲ್..ಸೆಪ್ಟೆಂಬರ್ 10, 2026: ಇಂದು ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಡಿ09 ಸೆಪ್ಟೆಂಬರ್ 2026 — ಎಲ್ಲಾ ರಾಶಿಗಳ ದಿನ ಭವಿಷ್ಯ..ಬಿಜೆಪಿಗರು ಕೂತು ಕೂತು ಸೋಮಾರಿಗಳಾಗಿದ್ದಾರೆ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರಾಯಚೂರಿನ ಮಾಲ್‌ಗಳಲ್ಲಿ ಬಟ್ಟೆ ಖರೀದಿಸುವಾಗ ಎಚ್ಚರಿಕೆ..!ಬಿಜೆಪಿಗೆ ನಾಚಿಕೆ ಇಲ್ಲ, ವಿರೋಧ ಪಕ್ಷದ ಘನತೆ ಗೌರವ ಕಳೆದುಕೊಂಡಿದ್ದಾರೆ.. ದೇವದುರ್ಗ ಪಟ್ಟಣದಲ್ಲಿ ಟವರ್ ತುತ್ತತುದಿಗೇರಿದ ಯುವಕನ ಹುಚ್ಚಾಟ..ನೇಪಾಳ-ಟಿಬೆಟ್ ಗಡಿಯಲ್ಲಿ ವಿನಾಶಕಾರಿ ಪ್ರವಾಹ: ಮೈ ಜುಮ್ ಎನಿಸುವ ವೀಡಿಯೋನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆಬಹಿರಂಗ ಸಮಾವೇಶ ವೇದಿಕೆಯಲ್ಲಿ ಮುಖಂಡರ ಮಾತಿನ ಚಕಮಕಿ..