
ರಾಯಚೂರು ನಗರದಲ್ಲಿ ಕೊರೋನಾ ನಂತರದ ಅವಧಿಯಲ್ಲಿ ಒಂದರ ಮೇಲೊಂದು ಮಾಲ್‌ಗಳು ಆರಂಭವಾಗುತ್ತಿದ್ದು, ವಿವಿಧ ಬ್ರ್ಯಾಂಡ್‌ಗಳ ಬಟ್ಟೆಗಳು ಒಂದೇ ಸೂರಿನಡಿ ಲಭ್ಯವಾಗುತ್ತಿವೆ. ಕಡಿಮೆ ದರ ಹಾಗೂ ಆಕರ್ಷಕ ಆಫರ್‌ಗಳ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್‌ಗಳಿಗೆ ತೆರಳಿ ಬಟ್ಟೆ ಖರೀದಿಸುತ್ತಿದ್ದಾರೆ. ಆದರೆ ಬಟ್ಟೆ ಖರೀದಿಸುವ ಮುನ್ನ ಗ್ರಾಹಕರು ಕೆಲವು ಅಂಶಗಳನ್ನು ಗಮನಿಸುವ ಅಗತ್ಯವಿದೆ.
ಹೊಸ ಬಟ್ಟೆಗಳಿಗೆ ಕಳ್ಳತನ ತಡೆಗಟ್ಟುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಸೆಕ್ಯೂರಿಟಿ ಟ್ಯಾಗ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಟ್ಯಾಗ್‌ಗಳನ್ನು ಬಟ್ಟೆಗಳಿಗೆ ಪಿನ್‌ಗಳ ಮೂಲಕ ಜೋಡಿಸಲಾಗುತ್ತದೆ. ಬಟ್ಟೆ ಖರೀದಿಸಿದ ಬಳಿಕ ಸೆಕ್ಯೂರಿಟಿ ಟ್ಯಾಗ್‌ಗಳನ್ನು ತೆಗೆದುಹಾಕಲಾಗುತ್ತದೆ.
ಆದರೆ ಭಾಗಶಃ ಬಟ್ಟೆಗಳು ಈ ಪಿನ್‌ಗಳಿಂದ ಬಟ್ಟೆಯ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಅಥವಾ ಹರಿದ ಗುರುತು ಉಂಟಾಗುತ್ತದೆ. ವಿಶೇಷವಾಗಿ ಸೂಕ್ಷ್ಮ ಹಾಗೂ ತೆಳುವಾದ ಬಟ್ಟೆಗಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರಬಹುದು. ಇದರಿಂದ ಹೊಸ ಬಟ್ಟೆಯ ಗುಣಮಟ್ಟಕ್ಕೆ ಧಕ್ಕೆಯಾಗುವ ಜೊತೆಗೆ, ಕಾಲಕ್ರಮೇಣ ಪಿನ್ ಹಾಕಿದ ಜಾಗ ಮತ್ತಷ್ಟು ಹರಿಯುವ ಸಾಧ್ಯತೆಯೂ ಇದೆ.
ಹೀಗಾಗಿ ಮಾಲ್‌ಗಳಲ್ಲಿ ಬಟ್ಟೆ ಖರೀದಿಸುವ ಗ್ರಾಹಕರು ಬಟ್ಟೆಯ ಪ್ರತಿಯೊಂದು ಭಾಗವನ್ನು ಪರಿಶೀಲಿಸಿ, ವಿಶೇಷವಾಗಿ ಸೆಕ್ಯೂರಿಟಿ ಟ್ಯಾಗ್ ಅಳವಡಿಸಿದ್ದ ಜಾಗದಲ್ಲಿ ಯಾವುದೇ ರಂಧ್ರ, ಹರಿತ ಅಥವಾ ಹಾನಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಖರೀದಿಸುವುದು ಉತ್ತಮ.