ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಯುವಕನೊಬ್ಬ ಟವರ್‌ನ ತುತ್ತತುದಿಗೇರಿ ಆತಂಕ ಸೃಷ್ಟಿಸಿದ್ದ. ಪಟ್ಟಣದ ಗರ್ಲ್ಸ್ ಹೈಸ್ಕೂಲ್ ಹಿಂಭಾಗದಲ್ಲಿರುವ ಟವರ್ ಏರಿರುವ ಯುವಕನನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಒಂದು ಕಡೆ ಅಗ್ನಿಶಾಮಕ ಸಿಬ್ಬಂದಿಯೂ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದರು. ಯುವಕ ಅತಿ ಎತ್ತರದಲ್ಲಿರುವ ಕಾರಣ ಮನವೊಲಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಒಮ್ಮೊಮ್ಮೆ ಕೆಳಗೆ ಬೀಳುವಂತೆಯೂ ವರ್ತಿಸುತ್ತಿರುವುದು ಆತಂಕ ಹೆಚ್ಚಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಟವರ್ ಮೇಲೆಯೇ ಕುಳಿತಿದ್ದ ಯುವಕ ಯಾರು, ಯಾವ ಊರಿನವನು ಹಾಗೂ ಏಕೆ ಟವರ್ ಏರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನ ಮುಂದುವರಿಸಿದ್ದಾರೆ.
ಕೊನೆಗೂ ಪೊಲೀಸರು ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆ ಯಶಸ್ವಿಯಾಗಿ ಯುವಕನನ್ನ ಟವರ್ ನಿಂದ ಕೆಳಗಿಳಿಸಿ, ರಾಯಚೂರು ಡ್ರೀಮ್ಸ್ ಆಸ್ಪತ್ರೆಗೆ ದಾಖಲೆಸಿದ್ದಾರೆ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.