This is the title of the web page
This is the title of the web page
State NewsVideo News

ಅಯೋಧ್ಯೆ ರಾಮಮಂದಿರ ಉದ್ಘಾಟನೆ : ಮೋದಿ ಭಾಗವಹಿಸಿದ್ದು ಖಂಡನೀಯ


K2kannadanews.in

Protest Modi ರಾಯಚೂರು : ಅಯೋಧ್ಯೆಯ ರಾಮಮಂದಿರ (Ayodhya Ramamandira) ಉದ್ಘಾಟನೆಯ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಭಾಗವಹಿಸುವುದನ್ನು ಸಿಪಿಐ(ಎಂಎಲ್) ರೆಡ್ ಸ್ಟಾರ್ (CPIML) ರಾಯಚೂರು ಜಿಲ್ಲಾ ಸಮಿತಿ ಕಾರ್ಯ ಖಡಿಸಿ ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದರು.

ಭಾರತ (India) ಒಂದು ಸ್ವತಂತ್ರ ಸಾರ್ವಭೌಮ ಜಾತ್ಯಾತೀತ ಸಮಾಜವಾದಿ ಆಶಯವನ್ನು ಹೊಂದಿರುವಂತಹ ದೇಶವಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿ (Complementarily) ಹಾಗೂ ಸಂವಿಧಾನಾತ್ಮಕವಾಗಿ (constitutively)
ಕಾರ್ಯನಿರ್ವಹಿಸಬೇಕಾದ ಸರ್ಕಾರಗಳು ಒಂದು ಧರ್ಮದ ವಕಾಲತ್ತುವಹಿಸುವುದು ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಈಗಾಗಲೇ ದೇಶಾದ್ಯಂತ ನಿರುದ್ಯೋಗ (Unemployment), ಹಸಿವು (hunger), ಬಡತನ (Poor), ಬೆಂಬಲ ಬೆಲೆಯ ಕೊರತೆ, ಹೀಗೆ ಆರೋಗ್ಯದ ಸಮಸ್ಯೆ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನತೆಯ ನೆರವಿಗೆ ಬಾರದೆ ಜನರಿಂದ ಸಂಗ್ರಹಿಸಲ್ಪಟ್ಟ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟುವುದಕ್ಕೆ ಬಳಸುವುದು ಕೂಡ ಸಂವಿಧಾನದ ಉಲ್ಲಂಘನೆಯಾಗಿದೆ.

ಹಾಗೆಯೆ, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ (anti-farmer), ಕಾರ್ಮಿಕ ವಿರೋಧಿ (anti-labour), ಜಾತ್ಯಾತೀತ ವಿರೋಧಿ (anti-secular), ಆದಿವಾಸಿ ವಿರೋಧಿ ಹಾಗೂ ದಲಿತ ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ದೇಶದ ಸಂಪನ್ಮೂಲಗಳನ್ನು ಹಾಗೂ ಸೇವಾ ವಲಯಗಳನ್ನು ಕಾರ್ಪೊರೇಟರ್ ಲಾಭಕ್ಕೆ ತಕ್ಕಂತೆ ಖಾಸಗಿಕರೀಸುತ್ತಾ, ದೇಶದ ಅಭಿವೃದ್ಧಿಗೆ ಮಾರಕವಾದ ನೀತಿಗಳನ್ನು ಜಾರಿ ಮಾಡುತ್ತಾ ನಡೆದಿದೆ. ಒಂದೆಡೆ ಬಂಡವಾಳಿಗರ ಬಂಡವಾಳ ದುಪ್ಪಟ್ಟಾಗುತ್ತಿದ್ದು ಕೂಲಿ ಕಾರ್ಮಿಕರ ರೈತರ ಬದುಕು ಹೀನಾಯವಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.


[ays_poll id=3]