This is the title of the web page
This is the title of the web page
Health & FitnessState News

ಮದ್ರಾಸ್ ಐ ಕಣ್ಣು ನೋಡಿದರೆ ಹರಡುವುದಿಲ್ಲ : ನಿಯಂತ್ರಣಕ್ಕೆ ಇಷ್ಟು ಮಾಡಿ


K2 ಹೆಲ್ತ್ ಟಿಪ್ : ಮಳೆಗಾಲದ ಸಂದರ್ಭದಲ್ಲಿ ಜನರನ್ನು ಹೆಚ್ಚಾಗಿ ಬಾಧಿಸುವ ರೋಗಗಳಲ್ಲಿ ಮದ್ರಾಸ್ ಐ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಈ ಒಂದು ರೋಗ ಲಕ್ಷಣದ ಬಗ್ಗೆ ತಪ್ಪು ಕಲ್ಪನೆಯು ಇದೆ.

ಸೋಂಕು ಹರಡುವ ರೀತಿ ಮತ್ತು ಲಕ್ಷಣಗಳು: ಈ ಮದ್ರಾಸ್ ಐ (ಕೆಂಪು ಕಣ್ಣು), ಸೋಂಕು ಹೊಂದಿರುವವರ ಕಣ್ಣನ್ನು ನೋಡಿದರೆ ಹರಡುವುದಿಲ್ಲ. ಹಲವು ಜನರು ಸೋಂಕು ಇರುವವರನ್ನು ನೋಡಿದರೆ ಅದು ಹರಡುತ್ತದೆ ಎಂದುಕೊಂಡಿರುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಈ ಸೋಂಕು ಕಾಯಿಲೆ ಇರುವವರ ಜೊತೆ ಹಸ್ತಲಾಘವ, ಆಲಂಗಿಸುವುದರ ಮೂಲಕ ಹರಡುತ್ತದೆ. ಈ ಸೋಂಕು ಇರುವವರು ಮುಟ್ಟಿದ ಯಾವುದೇ ವಸ್ತುಗಳನ್ನು ಮುಟ್ಟಿದರೂ ಈ ಸೋಂಕು ಹರಡುತ್ತದೆ. ಉದಾಹರಣೆಗೆ ಸೋಂಕು ಇರುವ ವ್ಯಕ್ತಿ ಬಳಸಿದ ಕರ್ಚಿಫ್, ಟವೆಲ್, ಇನ್ನಿತರ ವಸ್ತುಗಳನ್ನು ಮುಟ್ಟುವುದರಿಂದ ರೋಗ ಹರಡಬಹುದು. ರೋಗ ಲಕ್ಷಣಗಳೆಂದರೆ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಜಿಬ್ರೆ ಬರುವುದು. ಕಣ್ಣಿನಲ್ಲಿ ತುರಿಕೆ ಉಂಟಾಗುವುದು ಇತ್ಯಾದಿ.

ಸೋಂಕು ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ :

ಸೋಂಕು ಹೆಚ್ಚಾಗಿ ಹಾಸ್ಟೆಲ್​ನಲ್ಲಿರುವ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಾಸ್ಟೆಲ್​ನಲ್ಲಿ ಮಕ್ಕಳು ಗುಂಪು ಗುಂಪಾಗಿಯೇ ಇರುತ್ತಾರೆ. ಈ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಶಾಲೆಗೆ ಹೋಗುವ ಮಕ್ಕಳಲ್ಲೂ ಈ ಸೋಂಕು ಹೆಚ್ಚಾಗಿ ಹರಡುತ್ತದೆ. ಮಕ್ಕಳು ಒಟ್ಟಿಗೆ ಇರುವುದರಿಂದ ಹೆಚ್ಚು ಸೋಂಕು ತಗುಲುವ ಅಪಾಯ ಇರುತ್ತದೆ ಎಂಬುದು ವೈದ್ಯರ ಮಾತಾಗಿದೆ.


[ays_poll id=3]