This is the title of the web page
This is the title of the web page
Crime NewsState News

ಪಾಗಲ್ ಪ್ರೇಮಿ ಪ್ರೇಯಸಿ ರುಂಡ ಕಡಿದ ಪ್ರಕರಣ : ಜೀವಾವಧಿ ಶಿಕ್ಷೆ.!


K2kannadanews.in

Mad lover’s : ಕೆಲ ದಿನಗಳ ಹಿಂದೆ ಆ ಒಂದು ಪ್ರಕರಣ ಇಡಿ ನಗರವನ್ನೆ ಬೆಚ್ಚಿ ಬೀಳುವಂತೆ ಮಾಡಿದ್ದ, ಮಾಜಿ ಪ್ರೇಯಸಿಯ (Ex lover) ರುಂಡ (Head) ಕಡಿದ (Cut) ಪಾಗಲ್ ಪ್ರೇಮಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ (imprisonment) ವಿಧಿಸಿದ್ದು ಭೋಜರಾಜ ಎಂಬಾತನೇ ಜೈಲುಪಾಲಾದ ಕಿರಾತಕ.

ಹೌದು ವಿಜಯನಗರ (vijayanagar) ಜಿಲ್ಲೆಯ ಕೂಡ್ಲಿಗಿ (kudligi) ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ, ಕಳೆದ ವರ್ಷ ಜುಲೈ 21ರಂದು ಈ ಭೀಕರ ಘಟನೆ ನಡೆದಿತ್ತು. ಅಪರಾಧಿ (Accused) ಭೋಜರಾಜ ತನ್ನ ಮಾಜಿ ಪ್ರೇಯಸಿಯಾಗಿದ್ದ ನಿರ್ಮಲಾ(23)ಳನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಮಾಡಿದ ತಪ್ಪಿಗೆ ಇದೀಗ ಭೋಜರಾಜ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಹೊಸಪೇಟೆ (Hospet) ಸಿವಿಲ್ ಜಡ್ಜ್ (Judge) ಸೀನಿಯರ್ ಡಿವಿಜನ್ ಹಾಗೂ ಜೆಎಂಎಫ್​ಸಿ (JMFC) ಕೋರ್ಟ್‌ನಿಂದ ತೀರ್ಪು ಹೊರಬಿದ್ದಿದೆ. ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ನಂದಡಗಿ ಆದೇಶ ಹೊರಡಿಸಿದ್ದಾರೆ.

ಅಪರಾಧಿ ತನ್ನ ಮಾಜಿ ಪ್ರೇಯಸಿಯಾಗಿದ್ದ ನಿರ್ಮಲಾ ಎಂಬಾಕೆಯನ್ನು ಭೀಕರವಾಗಿ ಹತ್ಯೆ (Danger murder) ಮಾಡಿದ್ದ. ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಈ ಪಾಗಲ್ ಪ್ರೇಮಿ ಕೇಳಿದ್ದ. ಯುವತಿಯ ಮನೆಯವರು ಒಪ್ಪದಿದ್ದಾಗ ಬೇರೆ ಯುವತಿಯನ್ನು ಮದುವೆಯಾಗಿದ್ದ (Marriage). ತನ್ನ ಮದುವೆಯಾಗಿ ಎರಡು ತಿಂಗಳ ನಂತರ ಊರಿಗೆ ಬಂದ ನಿರ್ಮಲಾಳ ತಲೆಯನ್ನು ಮಚ್ಚಿನಿಂದ (Long) ಕಡಿದು, ರುಂಡದೊಂದಿಗೆ ಠಾಣೆಗೆ ಬಂದು ಭೋಜರಾಜ ಶರಣಾಗಿದ್ದ.


[ays_poll id=3]