This is the title of the web page
This is the title of the web page
Local News

ಲೋಕಾಯುಕ್ತ ದಾಳಿ ಅಪಾರ ಪ್ರಮಾಣದ ಆಸ್ತಿ ಅತ್ತೆ..!


ರಾಯಚೂರು : ರಾಜ್ಯದ್ಯಂತ 62 ಕಡೆ ದಾಳಿ ನಡೆಸಿದ ಲೋಕಾಯುಕ್ತ ರಾಯಚೂರು ಜಿಲ್ಲೆಯ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಪಾರ ಮೌಲ್ಯದ ನಗದು ಹಾಗೂ ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಂಧನೂರಿನಲ್ಲಿದ್ದ ಬಾಡಿಗೆ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು 13 ಲಕ್ಷ ನಗದು, 1 ಕೆ.ಜಿ ಚಿನ್ನ, 2 ಕೆಜಿ ಬೆಳ್ಳಿ ಆಭರಣ ಹಾಗೂ ಆಸ್ತಿಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶರಣಪ್ಪ ಅವರು ಖಣದಾಳ ಗ್ರಾಮದಲ್ಲಿ 32.75 ಲಕ್ಷ ಮೌಲ್ಯದ 10 ಎಕರೆ ತೋಟ, 12.30 ಲಕ್ಷ ಮೌಲ್ಯದ 3 ಎಕರೆ, 6.25 ಲಕ್ಷ ಮೌಲ್ಯದ 1.27 ಎಕರೆ ಜಮೀನು ಹಾಗೂ ಆಳಂದ ತಾಲ್ಲೂಕಿನ ಮುನ್ನಳ್ಳಿ ಗ್ರಾಮದಲ್ಲೂ 3 ಎಕರೆ ಜಮೀನು ಹೊಂದಿದ್ದಾರೆ. ತೋಟದಲ್ಲಿ 70 ಲಕ್ಷ ಮೌಲ್ಯದ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

10 ಲಕ್ಷ ಮೌಲ್ಯದ ಮಹೇಂದ್ರ ಬುಲೆರೊ, ₹
2.30 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, 10 ಲಕ್ಷ ನಗದು, 15 ಲಕ್ಷ ಮೌಲ್ಯದ ಬೆಳ್ಳಿ, 1 ಲಕ್ಷ ಮೌಲ್ಯದ ಸಾಮಾಗ್ರಿ ಪತ್ತೆಯಾಗಿವೆ. ನಗರದ ಉದನೂರ ಗ್ರಾಮದಲ್ಲಿ 11 ಲಕ್ಷ ಮೌಲ್ಯದ 3 ನಿವೇಶನಗಳು, ಐಯ್ಯರವಾಡಿ ಆಸೀಫ್‌ ಗಂಜ್ ವಾರ್ಡ್‌ನಲ್ಲಿ 2.45 ಲಕ್ಷ ಮೌಲ್ಯದ ಮನೆ, 10 ಲಕ್ಷ ಮೌಲ್ಯದ ಚಿನ್ನಾಭರಣ, 4 ಲಕ್ಷದ ಕೃಷಿ ಯಂತ್ರೋಪಕರಣಗಳು, 12 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರಾಲಿ ಸೇರಿ ದಾಳಿ ವೇಳೆ ಒಟ್ಟು 2.59 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

PWD ಎಇಇ ಮನೆ ಮೇಲೆ ದಾಳಿ : ರಾಯಚೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಜಿ.ಎನ್‌. ಪ್ರಕಾಶ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಪ್ರಕಾಶ ಮನೆಯಲ್ಲಿ ನಗದು, ಚಿನ್ನಾಭರಣ ದೊರಕಿದೆ. ಅವರ ಪುತ್ರ ಅಕ್ಷಯ ಹೆಸರಿನಲ್ಲಿ 14 ಎಕರೆ ಮಾವಿನ ತೋಟ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


[ays_poll id=3]