This is the title of the web page
This is the title of the web page
National NewsPolitics News

ಏಪ್ರಿಲ್‌ 16ರಿಂದ ಲೋಕಸಭೆ ಚುನಾವಣೆ?‌


K2kannadanews.in

Political News : ಲೋಕಸಭೆ ಚುನಾವಣೆ-2024ಕ್ಕೆ (Lok Sabha Election 2024) ಇನ್ನೇನು ದಿನಾಂಕ ಘೋಷಣೆ ಆಗುತ್ತೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಸಂದೇಶವೊಂದನ್ನು ಚುನಾವಣಾ ಆಯೋಗ (Election commission) ತನ್ನ ಎಕ್ಸ್‌ (X) ಹ್ಯಾಂಡಲ್‌ ಹರಿಬಿಟ್ಟಿದೆ.

ಆ ಪ್ರಕಾರ ದಿನಾಂಕವೊಂದನ್ನು ತಾತ್ಕಾಲಿಕವಾಗಿ ನಿಗದಿಪಡಿಸಿರುವುದಾಗಿ ತಿಳಿಸಿದೆ. ಆ ದಿನಾಂಕ ಏಪ್ರಿಲ್‌ 16. ಆಯೋಗದ ಪ್ರಕಾರ ಇದು ಅಧಿಕಾರಿಗಳ ಕರ್ತವ್ಯ ಪರಿಪಾಲನೆಯ ಪರಿಶೀಲನೆಗಾಗಿ ನಿಗದಿಪಡಿಸಲಾದ ತಾತ್ಕಾಲಿಕ ದಿನಾಂಕವಾಗಿದೆ. ಏಪ್ರಿಲ್‌ 16ನ್ನು ಲೋಕಸಭೆ ಚುನಾವಣೆ ಮತದಾನದ ಹಂತಗಳ ಆರಂಭದ ದಿನಾಂಕ ಎಂದು ನಿಗದಿಪಡಿಸಲಾಗಿದೆಯೇ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೆಲವು ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಿವೆ. ಏಪ್ರಿಲ್‌ 16 ಚುನಾವಣಾ ಆಯೋಗದ ಅಧಿಕಾರಿಗಳು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಪರಿಶೀಲನೆಗಾಗಿ ಈ ದಿನಾಂಕವನ್ನು ʼತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ’ ಎಂದು ಚುನಾವಣಾ ಆಯೋಗ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಿಸಲಿದೆ ಎಂಬ ಊಹೆ ದಟ್ಟವಾಗಿ ಹರಡಿದೆ. ಇತ್ತೀಚೆಗೆ ಆಯೋಗದ ದಿಲ್ಲಿ ಕಚೇರಿ ಈ ಕುರಿತ ಪ್ಲಾನಿಂಗ್‌ಗಾಗಿ ತನ್ನ ಅಧಿಕಾರಿಗಳಿಗೆ ಸರ್ಕ್ಯುಲರ್‌ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಅನುಮಾನ ಮೂಡಿತ್ತು.


[ays_poll id=3]