
ಸಿಂಧನೂರು : ಹಿಂದಿನ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ತನಿಖೆಯನ್ನು ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಸರ್ಕಾರದ ತನಿಕ ತಂಡವನ್ನು ರಾಯಚೂರು ಜಿಲ್ಲೆಯಲ್ಲಿ ಬಿಡು ಬಿಟ್ಟಿದ್ದು ಕಾಮಗಾರಿಗಳ ಬಗ್ಗೆ ಪರಿಶೀಲನೆಯನ್ನು ನಡೆಸುವೆ.
ಹೌದು KKRDB ಅಕ್ರಮಗಳ ಕುರಿತು ತನಿಖೆಗಾಗಿ ಬಂದಿರುವ ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ ನೇತೃತ್ವದ ತನಿಖಾಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ತನಿಖೆಯನ್ನು ಆರಂಭಿಸಿದ್ದು ಜಿಲ್ಲೆಯ ಸಿಂಧನೂರು ತಾಲೂಕಿನ ಪುನರ್ವಸತಿ ಕ್ಯಾಂಪ್ (ಆರ್.ಎಚ್.ಕ್ಯಾಂಪ್)-5ಕ್ಕೆ ಭೇಟಿ ನೀಡಿ 2018 ರಲ್ಲಿ ನಡೆದ ಸಿಸಿ ರಸ್ತೆ ಕಾಮಗಾರಿಯಿಂದನಾ ಪರಿಶೀಲನೆ ಮಾಡಿದೆ. ಕಲ್ಯಾಣ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ವಹಿಸಿದ ಸಿಸಿ ರಸ್ತೆ ಕಾಮಗಾರಿಯು ಬಿರುಕು ಬಿಟ್ಟಿರುವುದನ್ನು ತನಿಖಾ ತಂಡ ಪರಿಶೀಲನೆ ನಡೆಸಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2018 ರಲ್ಲಿ ₹1.2 ಕೋಟಿ ಸಿಸಿ ರಸ್ತೆಗಾಗಿ ಮಂಜೂರು ಮಾಡಿ ಕಾಮಗಾರಿ ನಿರ್ವಹಿಸುವ ಜವಾಬ್ದಾರಿಯನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. 2019 ರಲ್ಲಿ ₹ 82 ಲಕ್ಷ ಹಣ ಪಾವತಿಯಾಗಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರರ ಕೆಲಸ ತೃಪ್ತಿಕರವಾಗಿಲ್ಲ ಮತ್ತು ವಾಸ್ತವಿಕವಾಗಿ ಗುಣಮಟ್ಟದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಂಡದ ಮೂಲಗಳಿಂದ ತಿಳಿದು ಬಂದಿದೆ.
![]() |
![]() |
![]() |
![]() |
![]() |
[ays_poll id=3]