This is the title of the web page
This is the title of the web page
Crime NewsState News

ಕಾಟೇರಾಗೆ ಪೈರಸಿ ಕಾಟ : ಪೈರಸಿ ಕಾಟ ಯುವಕನ ವಿರುದ್ಧ ..!


K2kannadanews.in

ರಾಯಚೂರು: ನಟ ದರ್ಶನ್ (Darshan) ಅಭಿನಯದ ಕಾಟೇರ ಸಿನಿಮಾ (Kaatera Movie) ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪೈರಸಿ (Pairs) ಕಾಟ ಕೂಡ ಶುರುವಾಗಿದೆ. ಈ ಬಗ್ಗೆ ವಿತರಕರು (Distributar) ಅಳಲು ತೋಡಿಕೊಂಡಿದ್ದಾರೆ.

ಕಟೇರ ಸಿನಿಮಾದ ಪೈರಸಿ ಲಿಂಕ್ (link) ಟಿಲಿಗ್ರಾಂ (Teligram) ಮೂಲಕ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಾಟ್ಸ್ ಆಪ್ (what’s app) ಮೂಲಕ ಚಾಟ್ (Chat) ಮಾಡಿ 40 ರೂ. ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಎಂಬುವವರು ರಾಯಚೂರಿನ ಸದರ್ ಬಜಾರ್​ ಪೊಲೀಸ್​ (Safmdarbajar police station) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ ಪೊಲೀಸರು ದೇವದುರ್ಗ (Devadurga) ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ (Monesh) ಎಂಬಾತನನ್ನು ಬಂಧಿಸಿದ್ದಾರೆ. ಮೌನೇಶ್ 40 ರೂಪಾಯಿಗೆ ಕಾಟೇರ ಸಿನಿಮಾದ ಪೈರಸಿ ಲಿಂಕ್​ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಇನ್ನೂ ಕಿಂಗ್​ ಪಿನ್​ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


[ays_poll id=3]