This is the title of the web page
This is the title of the web page
Entertainment NewsState News

ಕನ್ನಡ ನಾಮಫಲಕ ಕಡ್ಡಾಯ ತಂದ ಎಡವಟ್ಟು ಸರಿಯಾದ ಭಾಷೆ ಬಳಕೆಗೆ ಕಾನೂನು ಜಾರಿಗೊಳಿಸಲು ಆಗ್ರಹ.


K2kannadanews.in

nameplate mandatory : ಕನ್ನಡ ಪರ ಸಂಘಟನೆಗಳ ಒತ್ತಾಯಕ್ಕೆ ಮಣಿದ ಸರ್ಕಾರ (Government), ಸರ್ಕಾರ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ (Kannada board) ಹಾಕಲು ಆದೇಶ ಹೊರಡಿಸಿದೆ. ಆದೇಶ ಪಾಲಿಸಲು ಮುಂದಾದ ಅನೇಕರು ಭಾಷಾಂತರಕ್ಕೆ ಗೂಗಲ್‌ ಟ್ರಾನ್ಸ್‌ಲೇಟ್‌ (Google translate) ಮೊರೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಆ ಎಡವಟ್ಟು ನಿಮ್ಮನ್ನು ತಲೆ ತಿರುಗಿಸುತ್ತೆ.

ನಾಮ ಫಲಕದ ವಿಚಾರದಲ್ಲಿ ನಡೆಯುತ್ತಿರುವ ಎಡವಟ್ಟು (Mistakes) ಒಂದೆರಡಲ್ಲ. ಇದು ಕೇವಲ ಸಣ್ಣ ಉದಾಹರಣೆಯಷ್ಟೇ (Small example). ಒಂದು ಕಡೆ SPEXHOUSE ಇದ್ದ ಬೋರ್ಡ್‌ ಅನ್ನು ಭಾಷಾಂತರಗೊಳಿಸಿ ʼಸೆಕ್ಸ್‌ಹೌಸ್‌ʼ ಮಾಡಲಾಗಿದೆ ! ಇನ್ನೊಂದು ಕಡೆ ʼನಮ್ಮ ಗೋಲ್‌ಗಪ್ಪೆ ಅಂಡ್‌ ಫಲೂದಾ ಪಾಯಿಂಟ್‌ʼ ಬೋರ್ಡ್‌ ಕೂಡ ಕಣ್ಣಿಗೆ ರಾಚಿದೆ.

ಹೋಟೆಲ್‌ (Hotel) ಒಂದರಲ್ಲಿ ಕಂಡ ʼಊತ್ತ ಅ‍ಣ್ಣಾಸಂಬರ್‌, ರೈಸ್‌ ಬಾತ್‌, ಇಡಲಿ ವದ, ದೋಷ ಸೆಟ್‌, ಮಸಾಲಾ ದೋಷʼ ಮೆನು ಓದಿ ತಲೆ ತಿರುಗುವೊಂದು ಬಾಕಿ ಎಂದು ಕನ್ನಡಿಗರೊಬ್ಬರು ಹೇಳಿದ್ದಾರೆ. ಕನ್ನಡದ ನಾಮ ಫಲಕ ಅಳವಡಿಸುವ ಜತೆಗೆ ಸರಿಯಾದ ಭಾಷೆ ಬಳಸುವಂತೆಯೂ ಕಾನೂನು ಜಾರಿಗೊಳಿಸಬೇಕು ಎನ್ನುವುದು ಬಹುತೇಕರ ಆಗ್ರಹ.


[ays_poll id=3]