This is the title of the web page
This is the title of the web page
Crime NewsLocal NewsVideo News

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ


K2kannadanews.in

ಸಿಂಧನೂರು : ಅಕ್ರಮವಾಗಿ ಜಮೀನಿನ ಶೆಡ್ (shed) ಒಂದರಲ್ಲಿ ಗಾಂಜಾ (ganja) ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಂಧನೂರು  ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ.

ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಆರ್.ಎಚ್.ಕ್ಯಾಂಪ್(RH camp) ನಂ.2ರ ಜಮೀನಿನ ಶೆಡ್‌ನಲ್ಲಿ, ಹನುಮೇಶ ಸರಕಾರ ಎಂಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇಲೆ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಶೆಡ್ ನಲ್ಲಿ 2.61 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.


[ays_poll id=3]