This is the title of the web page
This is the title of the web page
National News

ನೀವು ಈ ಕೆಲಸ ಮಾಡದಿದ್ದರೇ ಫೆ.17 ನಂತರ ಬೀಳಲಿದೆ 1000 ದಂಡ..?


K2kannadanews.in

HSRP Number Plates : ನಿಮ್ಮ ಬಳಿ ಇರುವ ವಾಹನಕ್ಕೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲವಾದರೇ, ಕೂಡಲೆ ಅರ್ಜಿ ಸಲ್ಲಿಸಿ. ಇಲ್ಲವಾದರೇ ಫೆಬ್ರವರಿ (February) 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.

HSRP ನಂಬರ್ ಪ್ಲೇಟ್ ಹಾಕಿಸಲು ಸಾರಿಗೆ ಇಲಾಖೆ 2023ರ ನವೆಂಬರ್ 17ರ ಗಡುವು ವಿಧಿಸಿದ್ದು, ಬಳಿಕ 2024ರ ಫೆಬ್ರವರಿ 17ರವರೆಗೆ ವಿಸ್ತರಿಸಲಾಗಿದೆ (Extend). ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದರೂ ಇದುವರೆಗೂ ಕೇವಲ 10 ಲಕ್ಷ ವಾಹನಗಳಿಗೆ (Vehicles) ಮಾತ್ರ ನಂಬರ್ ಪ್ಲೇಟ್ ಹಾಕಿಸಲಾಗಿದೆ. ಇನ್ನೂ ಭಾರಿ ಸಂಖ್ಯೆಯ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಲ್ಲ. ಗಡುವು ಮುಗಿದ ನಂತರ ವಾಹನಗಳ ಪರಿಶೀಲಿಸಿ ದಂಡ ವಿಧಿಸಲಾಗುವುದು.

ದ್ವಿಚಕ್ರ(Bike) ವಾಹನಗಳಿಗೆ 390 ರೂ.ಯಿಂದ 440 ರೂ., 4 ಚಕ್ರದ ವಾಹನಗಳಿಗೆ 680 ರೂ. ಯಿಂದ 690 ರೂಪಾಯಿ ದಂಡ ವಿಧಿಸಲಾಗುವುದು. ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ದಂಡ ವಿಧಿಸಲಿದ್ದು, ಮೊದಲ ಸಲ ಸಿಕ್ಕಿ ಬಿದ್ದರೆ 1,000 ರೂ., ಎರಡನೇ ಸಲ ಸಿಕ್ಕಿ ಬಿದ್ದರೆ 2,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎನ್ನಲಾಗಿದೆ.


[ays_poll id=3]