
IPL ನ್ಯೂಸ್ : IPl 2023 ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಮೊದಲ ಪದ್ಯದಲ್ಲಿ ಗುಜರಾತ್ ಭರ್ಜರಿ ಗೆಲುವು ಕಂಡಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ ಭರ್ಜರಿ 92 ರನ್ ಗಳಿಸಿದರೆ, ನಾಯಕ ಎಂಎಸ್ ಧೋನಿ ಅಜೇಯ 14 ರನ್ ಗಳಿಸಿದರು. ಉಳಿದಂತೆ ಮೋಯಿನ್ ಅಲಿ 23, ಬೆನ್ ಸ್ಟೋಕ್ಸ್ 7, ಅಂಬಟಿ ರಾಯುಡು 12, ಶಿವನ್ ದುಬೆ 19 ರನ್ ಗಳಿಸಿದರು. ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ, ರಶೀಧ್ ಖಾನ್ , ಅಲ್ಜರಿ ಜೋಸೆಪ್ ತಲಾ 2 ವಿಕೆಟ್ ಪಡೆದರೆ, ಜೊಸ್ ಲಿಟ್ಲ್ 1 ವಿಕೆಟ್ ಪಡೆದರು.
IPL 2023: Gaikwad's blistering knock takes Chennai Super Kings to 178/7 against Gujarat Titans
Read @ANI Story | https://t.co/IToNzIhvyl#IndianPremierLeague #IPL2023 #RuturajGaikwad #MSDhoni #MSD #CSK #GT #GTvsCSK pic.twitter.com/8X4I7jGqik
— ANI Digital (@ani_digital) March 31, 2023
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 179 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭಿಕ ಆಟಗಾರರಾದ ವೃದ್ಧಿಮನ್ ಶಹಾ 25, ಶುಭ್ ಮನ್ ಗಿಲ್ 63, ಸಾಯಿ ಸುದರ್ಶನ್ 22 ಮತ್ತು ವಿಜಯ್ ಶಂಕರ್ 27 ರನ್ ಗಳಿಸಿದರು. ಮೂಲಕ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.
![]() |
![]() |
![]() |
![]() |
![]() |
[ays_poll id=3]