This is the title of the web page
This is the title of the web page
Health & Fitness

ಬಾಯಿಯ ದುರ್ವಾಸನೆ ಹೋಗಲಾಡಿಸಲು ಮನೆಮದ್ದು


K2 ಹೆಲ್ತ್ ಟಿಪ್ : ಬಾಯಲ್ಲಿ ಬರುವ ದುರ್ವಾಸನೆಯಿಂದಾಗಿ ಕೆಲವೊಮ್ಮೆ ಇದರಿಂದ ಇತರರ ಮುಂದೆ ಮುಜುಗರಕ್ಕೆ ಒಳಗಾಗುತ್ತೇವೆ. ಹಲ್ಲುಗಳನ್ನು ಸರಿಯಾಗಿ ಉಚ್ಚದಿದ್ದರೆ ಬಾಯಲ್ಲಿ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಬಾಯಿಂದ ಕೆಟ್ಟ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಮನೆಮದ್ದುಗಳು ಪರಿಹಾರ ನೀಡುತ್ತವೆ.

ಬಾಯಿಯ ದರ್ವಾಸನೆ ಹೋಗಲಾಡಿಸಲು ಮನೆಯಲ್ಲಿಯೇ ಸಿಗುವ ಮನೆಮದ್ದುಗಳಿಂದ ಇದನ್ನು ಪರಿಹರಿಸಬಹುದು.

* ಸೇಬುಗಳು ಮತ್ತು ಕ್ಯಾರೆಟ್ : ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ.ಅದೇ ರೀತಿಯಲ್ಲಿ ಸೇಬು ಮತ್ತು ಕ್ಯಾರೆಟ್ ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

* ನೀರು ಕುಡಿಯುವುದು : ಹೆಚ್ಚು ಹೆಚ್ಚು ನೀರು ಕುಡಿಯುವುದು ಒಂದು ಮಾರ್ಗವಾಗಿದೆ, ಇದರಿಂದ ಹೆಚ್ಚು ಲಾಲಾರಸ ಉತ್ಪತ್ತಿಯಾಗುತ್ತದೆ ಮತ್ತು ಬಾಯಿಯಲ್ಲಿ ಕೊಳಕು ಸಂಗ್ರಹವಾಗುವುದಿಲ್ಲ.

* ಲವಂಗ : ದಿನದಲ್ಲಿ ಕಡಿಮೆ ಅಂತರದಲ್ಲಿ ಲವಂಗವನ್ನು ಅಗಿಯಿರಿ. ಲವಂಗವು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಮೂಲಕ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಹಲ್ಲಿನ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದು ಬಾಯಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

 

* ಏಲಕ್ಕಿ : ಊಟ, ತಿಂಡಿಯಾದ ಬಳಿಕ ಒಂದು ಏಲಕ್ಕಿಯನ್ನು ಅಗೆಯುವುದಿರಂದ ಬಾಯಲ್ಲಿರುವ ದುರ್ವಾಸನೆ ಕಡಿಮೆಯಾಗುತ್ತದೆ. ಇದರಿಂದ ಪರರ ಮುಂದೆ ಮುಜುಗರಕ್ಕೆ ನೀವು ಒಳಗಾಗುವುದಿಲ್ಲ.

 

* ಹರ್ಬಲ್ ಪೌಡರ್ : ಈ ಮನೆಯಲ್ಲಿ ತಯಾರಿಸಿದ ಹರ್ಬಲ್ ಪೌಡರ್‌ನಿಂದ ಹಲ್ಲುಜ್ಜುವುದರಿಂದ ನಿಮ್ಮ ಬಾಯಿಯ ದುರ್ವಾಸನೆ ಮತ್ತು ಹಲ್ಲುಗಳಿಂದ ಇತರ ಅನೇಕ ವಸ್ತುಗಳನ್ನು ತೊಡೆದುಹಾಕುತ್ತದೆ. ಇದನ್ನು ತಯಾರಿಸಲು ದಾಲ್ಚಿನ್ನಿ, ಬೇವಿನ ಎಲೆಗಳ ಪುಡಿ, ತುಳಸಿ ಎಲೆಗಳ ಪುಡಿ ಮತ್ತು ಅಡಿಗೆ ಸೋಡಾ ಎಲ್ಲವನ್ನು ಮಿಶ್ರಣ ಮಾಡಿ ಪುಡಿ ತಯಾರಿಸಿ. ಪ್ರತಿದಿನ ಇದರಿಂದ ಹಲ್ಲು ಉಜ್ಜಬೇಕು.

ಈ ಮೇಲಿನ ಒಂದು ಅಂಶವನ್ನು ನೀವು ಪಾಲನೆ ಮಾಡಿದಲ್ಲಿ, ಪರರ ಮುಂದೆ ನಿಮ್ಮ ಬಾಯಿ ಧುರ್ವಾಸನೆಯಿಂದ ಮುಜುಗರಕ್ಕೆ ಒಳಗಾಗುವುದು ತಪ್ಪಿಸಬಹುದಾಗಿದೆ.


[ays_poll id=3]