This is the title of the web page
This is the title of the web page
National News

ಅಮ್ಮನ ಮಡಿಲಲ್ಲಿ ಮೊಬೈಲ್ ನೋಡುತ್ತಿದ್ದ ಕಂದಮ್ಮನಿಗೆ ಹೃದಯಾಘಾತ


K2kannadanews.in

Shocking News : ಹೃದಯಾಘಾತ (heart attack) ವಿಚಾರದಲ್ಲಿ ಇದೊಂದು ವಿಚಾರ ಕೇಳುವುದು ಬಾಕಿಯಿತ್ತು. ಈಗ ಆ ಸುದ್ದಿಯು ಹೊರಬಿದ್ದಿದೆ. ಅಮ್ಮನ ಮಡಿಲಲ್ಲಿ ಮೊಬೈಲ್ (Mobile) ನೋಡುತ್ತಿದ್ದ ಕಂದಮ್ಮನಿಗೆ ಹೃದಯಘಾತ ಆಗಿದೆ ಎಂದರೆ ನಂಬುತ್ತೀರಾ ನಂಬಲೇಬೇಕು.

ಉತ್ತರಪ್ರದೇಶದ (uttarpradesh) ಅಮ್ರೋಹಾ (amroha) ಜಿಲ್ಲೆಯ ಹಸನ್ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ಐದು ವರ್ಷದ ಮಗು (5 Years baby) ಹೃದಯಾಘಾತದಿಂದ ಮೃತಪಟ್ಟಿದೆ. ಹಾಸಿಗೆಯಲ್ಲಿ ಅಮ್ಮನ (Mother) ಹತ್ತಿರವೇ ಮಲಗಿಕೊಂಡು ಮೊಬೈಲ್ ನಲ್ಲಿ ಕಾರ್ಟೂನ್ (Mobile carton) ನೋಡುತ್ತಿದ್ದ ಮಗುವಿನ ಕೈನಿಂದ ಫೋನ್ (Phone) ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದೆ. ಬಳಿಕ ಮಗು ಪ್ರಜ್ಞಾಹೀನಗೊಂಡಿದ್ದು, ಕೂಡಲೇ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದ ಬಳಿಕ ಅದು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಹೃದಯಾಘಾತದಿಂದ ಮಗು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹಸನಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಧ್ರುವೇಂದ್ರಕುಮಾರ್ ಹೇಳಿದ್ದಾರೆ.


[ays_poll id=3]