
ರಾಯಚೂರು : ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದ ಕಂಪನಿ ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ 100 ಕೆ.ಜಿ.ಗಿಂತ ಹೆಚ್ಚು ಚಿನ್ನ ಉತ್ಪಾದನೆ ಮಾಡುವ ಮೂಲಕ ವಿಶೇಷ ಸಾಧನೆ ದಾಖಲಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಚಿನ್ನದ ಗಣಿಯಲ್ಲಿ ಆಗಸ್ಟ್ ತಿಂಗಳೊಂದರಲ್ಲಿ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿ, 110.600 ಕೆ.ಜಿ.ಚಿನ್ನ ಉತ್ಪಾದಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ ಮಾಸಿಕ ಸರಾಸರಿ ಚಿನ್ನ ಉತ್ಪಾದನೆ 100 ಕೆ.ಜಿ.ದಾಟಿರಲಿಲ್ಲ. ಏಪ್ರಿಲ್‌ನಲ್ಲಿ 98 ಕೆ.ಜಿ., ಮೇ ನಲ್ಲಿ 94 ಕೆ.ಜಿ., ಜೂನ್‌ನಲ್ಲಿ 98 ಕೆ.ಜಿ. ಹಾಗೂ ಜುಲೈನಲ್ಲಿ 99 ಕೆ.ಜಿ. ಚಿನ್ನ ಉತ್ಪಾದಿಸಲಾಗಿತ್ತು.
2023-24ನೇ ಸಾಲಿನಲ್ಲಿ 1,800 ಕೆ.ಜಿ. ಚಿನ್ನ ಉತ್ಪಾದನೆ ಗುರಿಯಿದ್ದು, 5 ತಿಂಗಳಲ್ಲಿ 501.865 ಕೆ.ಜಿ. ಉತ್ಪಾದನೆ ಸಾಧಿಸಲಾಗಿದೆ. ಉತ್ಪಾದನೆ ಹೆಚ್ಚಿಸಲು ಗಣಿ ಕಂಪನಿ ನಾನಾ ಅಭಿವೃದ್ಧಿ, ಆಧುನಿಕ ಸಲಕರಣೆಗಳ ಅಳವಡಿಕೆಗೆ ಮುಂದಾಗಿದೆ. 6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಫ್ಟ್ ಹೊಸ ಭರವಸೆ ಮೂಡಿಸಿದೆ.
![]() |
![]() |
![]() |
![]() |
![]() |
[ays_poll id=3]