
ರಾಯಚೂರು : ಮುಂಗಾರು ಹಂಗಾಮು ಬಿತ್ತನೆಗೆ ಸಜ್ಜಾಗಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ನಿರೀಕ್ಷೆಯಷ್ಟು ಸುರಿಯದೇ ಇರುವುದು ರೈತರನ್ನು ಹೈರಾಣು ಮಾಡಿದೆ. ಭೂಮಿಯನ್ನು ಹಸನುಗೊಳಿಸಿ, ಬಿತ್ತನೆಗಾಗಿ ಕಾಯ್ದಿರುವ ರೈತರು ಮಳೆಗಾಗಿ ಚಡಪಡಿಸುತ್ತಿದ್ದಾರೆ. ಒಂದು ಕಡೆ ಮಳೆರಾಯನಿಗೆ ಕಾಯುತ್ತಿರುವ ರೈತರು ಮತ್ತೊಂದು ಕಡೆ ಸಾಲದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ನೀರಾವರಿ ರೈತರು ಮತ್ತು ಒಳ ಭೂಮಿ ರೈತರು ಕೂಡ ಕಂಗಾಲಾಗಿದ್ದಾರೆ. ಅತ್ತ ಜಲಾಶಯಗಳು ಖಾಲಿಯಾಗಿವೆ, ಇತ್ತ ಮಳೆಯೂ ಬರುತ್ತಿಲ್ಲ. ಕೃಷಿ ಕೂಲಿಕಾರ ಕುಟುಂಬಗಳು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ರೈತಾಪಿ ವರ್ಗ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬಿತ್ತನಗೆ ಅಣಿಮಾಡಿಕೊಂಡು ವರುಣ ದೇವನ ಕೃಪೆಗಾಗಿ ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಸಹ ಮಳೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬೆಳೆ ಕೈಗೆ ಬಾರದೆ ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಕಾರ್ಮಿಕರಿಗಾಗಿ ವಿವಿಧೆಡೆ ಮಾಡಿದ ಸಾಲ ಮರುಪಾವತಿ ಮಾಡಲು ಹರಸಾಹಸ ಪಡುವ ಸ್ಥಿತಿಯಿತ್ತು. ಒಡವೆ ಗಿರವಿ ಇಟ್ಟು ಪಡೆದ ಸಾಲದ ಬಡ್ಡಿಯನ್ನು ಸಹ ತೀರಿಸಲು ಸಾಧ್ಯವಾಗದೆ ಪರದಾಡುವಂತಹ ಸ್ಥಿತಿಯಲ್ಲಿ ರೈತರಿದ್ದೇವೆ. ಆದರೆ ಈ ಸಲ ಮಳೆರಾಯ ಕೈಕೊಟ್ಟಿದ್ದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡಿದ್ದಾನೆ ಎನ್ನುತ್ತಾನೆ ಮುಂಡರಗಿ ಗ್ರಾಮದ ರೈತ ಸೂಗೂರಿ.
ಈ ಸಲ ಮುಂಗಾರು ಮಳೆ ವಾಡಿಕೆ ಗಿಂತ ಕಡಿಮೆ ಪ್ರಮಾಣದಲ್ಲಿ ಬಂದಿರುವುದರಿಂದ ಬಿತ್ತನೆಯ ಕಾರ್ಯ ವಿಳಂಬವಾಗುತ್ತಿದೆ. ಬೆಳಗಳ ಬೆಳವಣಿಗೆ ಮತ್ತು ಇಳುವರಿಯಲ್ಲಿ ವ್ಯತ್ಯಾಸ ಆಗುವ ಸಂಭವವಿದೆ ಅಂತ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ಹತ್ತಿ, ತೊಗರಿ ಜೂನ್ ತಿಂಗಳ ಕೊನೆಯವರೆಗೂ ಬಿತ್ತಲು ಬರುತ್ತದೆ. ಆದರೆ ಒಣ ಬೇಸಾಯ ಮಾಡುವ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ನಾನು 10 ಎಕರೆ ಹತ್ತಿ, ತೊಗರಿ ಬಿತ್ತಲು ಭೂಮಿ ಹದ ಮಾಡಿಕೊಂಡು ಕುಳಿತಿದ್ದೇನೆ. ಮಳೆ ಬಂದ ತಕ್ಷಣ ಬಿತ್ತುತ್ತೇನೆ. ನೀರಾವರಿ ಜಮೀನಿರುವ ರೈತರಿಗೆ ಯಾವ ತೊಂದರೆ ಆಗದು ಅಂತ ಜಿನ್ನಾಪುರ ಗ್ರಾಮದ ರೈತ ರಾಚಯ್ಯ ಸ್ವಾಮಿ ಹೇಳುತ್ತದ್ದಾರೆ.
![]() |
![]() |
![]() |
![]() |
![]() |
[ays_poll id=3]