ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗುತ್ತಂತೆ ಹಸಿ ಬಟಾಣಿ
![]() |
![]() |
![]() |
![]() |
![]() |
K2 ಹೆಲ್ತ್ ಟಿಪ್ : ಇತ್ತೀಚಿನ ದಿನಗಳಲ್ಲಿ ಮದುಮೇಹ, ರಕ್ತದ ಒತ್ತಡ ಎಂಬುವ ಕಾಯಿಲೆಗಳು ಸರ್ವೇಸಾಮಾನ್ಯವಾಗಿ ಹೋಗಿವೆ. ಇವುಗಳ ನಿಯಂತ್ರಣಕ್ಕೆ ಜನ ಎಲ್ಲಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಆದ್ರೆ ಅಡುಗೆಯ ಸ್ವಾದ ಮಾತ್ರವಲ್ಲದೆ ನಮ್ಮ ಆರೋಗ್ಯದ ವಿಚಾರದಲ್ಲೂ ಕೂಡ ಹಸಿ ಬಟಾಣಿ ಕಾಳುಗಳು ಉಪಯೋಗಕ್ಕೆ ಬರುತ್ತವೆ.
ಹೌದು ಹಸಿ ಬಟಾಣಿಯಲ್ಲಿ ಕಾರ್ಬೋಹೈಡ್ರೇಟ್ಗಳು ಪ್ರೋಟೀನ್,ಗ್ರಾಫೈಬರ್ ,ಕಬ್ಬಿಣ ,ಕ್ಯಾಲ್ಸಿಯಂ ,ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್ , ರಂಜಕ, ತಾಮ್ರ ವಿಟಮಿನ್ ಸಿ, 40ಮಿಗ್ರಾಂವಿಟಮಿನ್ ಬಿ 1 0.266 ವಿಟಮಿನ್ ಬಿ 2 ವಿಟಮಿನ್ ಬಿ,ವಿಟಮಿನ್ , ವಿಟಮಿನ್ ಬಿ ,ವಿಟಮಿನ್ ಎ ಪೋಷಕಾಂಶಗಳುಳ್ಳ ಆರೋಗ್ಯಕ್ಕೆ ಪರಿಣಾಮಕಾರಿಯಾಗಿ ಪರಿಣಾಮ ಬೀರುವ ಕಾಳು ಇದಾಗಿದೆ.
ಮಧುಮೇಹಕ್ಕೆ ಬಟಾಣಿ : ಹಸಿರು ಬಟಾಣಿಯು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ವಹಿಸುತ್ತದೆ. ಮತ್ತೊಂದು ಕ್ಲಿನಿಕಲ್ ಪ್ರಯೋಗದಲ್ಲಿ ಕಂಡುಬರುವಂತೆ ಹಸಿರು ಬಟಾಣಿ ಆಹಾರವು ಟೈಪ್ ಟು ಡಯಾಬಿಟಿಸನೊನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿರುಬಟಾಣಿಯಲ್ಲಿ ಫೈಬರ್ ಅಂಶವು ಹೆಚ್ಚಿರುವುದರಿಂದ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಟಾಣಿ ಕಾಳುಗಳನ್ನು ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಏಕೆಂದರೆ ಇವುಗಳಲ್ಲಿ ನಾರಿನಂಶ ಹೆಚ್ಚಾಗಿ ಕಂಡು ಬರುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ಹಸಿರು ಬಟಾಣಿಯಲ್ಲಿ ಫೈಬರ್ ಅಂಶವು ಹೇರಳವಾಗಿರುವ ಆಹಾರಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಸಾಲಿನಲ್ಲಿ ಬಟಾಣಿಯು ಸೇರುತ್ತದೆ. ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಸುಧಾರಿಸುತ್ತದೆ. ದ್ವಿದಳ ಧಾನ್ಯ ಗಳು ಹೃದಯದ ಆರೋಗ್ಯದಲ್ಲಿ ಸುಧಾರಣೆಗಳನ್ನು ನೀಡುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ. ಆಹಾರದಲ್ಲಿ ಕ್ರಮದಲ್ಲಿ ಹಸಿರು ಬಟಾಣಿಗಳನ್ನು ಸೇರಿಸುವುದರಿಂದ ಹೃದಯದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹೃದಯ ಸಂಬಂಧಿ ಖಾಯಿಲೆಗೆ ಯಾವುದೇ ಇತರ ಮನೆಮದ್ದು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
![]() |
![]() |
![]() |
![]() |
![]() |