This is the title of the web page
This is the title of the web page
Crime News

ಕಂಫರ್ಟ್ ಲಾಡ್ಜ್ ನಲ್ಲಿ ಕಂಫಟಾ೯ಗಿ ಸರ್ಕಾರಿ ಲೆಕ್ಕ ಪರಿಶೋಧಕ


ರಾಯಚೂರು : ಪ್ರತಿ ವರ್ಷ ಸರ್ಕಾರ ಇಂತಿಷ್ಟು ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಆ ಒಂದು ಅನುದಾನ ಬಳಕೆ ಮಾಡಿ ಅದಕ್ಕೆ ಲೆಕ್ಕ ಬರೆದಿಟ್ಟು ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ 2010 ರಿಂದ ಈ ಒಂದು ಕೆಲಸ ಮಾನ್ವಿ ತಾಲೂಕಿನಲ್ಲಿ ಆಗಿರಲಿಲ್ಲ. 11 ವರ್ಷಗಳ ಲೆಕ್ಕ ಪರಿಶೋಧಕ ಮಾಡಲು ಬಂದ ತಂಡ ಒಂದು ಮಾಡಿದ್ದೇನು ಗೊತ್ತಾ ? ಈ ಸ್ಟೋರಿ ನೋಡಿ..

ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನೆಗಾಗಿ, ರಾಜ್ಯ ಕೇಂದ್ರ ಕಚೇರಿ ಬೆಂಗಳೂರಿನಿಂದ ತಂಡವೊಂದು ಆಗಮಿಸಿತ್ತು. 2010 ರಿಂದ 2023 ರವರೆಗೆ ಮತ್ತು ಇತ್ತೀಚೆಗಿನ ವರ್ಷಗಳ ಕಡತಗಳನ್ನು ಪರಿಶೀಲನೆ ನಡೆಸುತ್ತದೆ. ಆದರೆ ಈ ತಂಡವೂ ಆಯಾ ಗ್ರಾಮ ಪಂಚಾಯತಿಗಳಿಗೆ ಖುದ್ದಾಗಿ ಭೇಟಿ ನೀಡಿ ಕಡತ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿತ್ತು.

 

ಆದರೆ ಅಧಿಕಾರಿಗಳನ್ನು ಅದನ್ನು ಬಿಟ್ಟು ಮಾನವಿ ಪಟ್ಟಣದಲ್ಲಿರುವ ಬಾಲಾಜಿ ಕಂಫರ್ಟ್ ಲಾಡ್ಜ್ ನಲ್ಲಿ ಕರ್ತವ್ಯದ ಸಮಯದಲ್ಲಿ ತಾಲೂಕಿನ ಇಒ ಹಾಗೂ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒ, ಸಿಬ್ಬಂದಿಗಳ ಸಹಕಾರದೊಂದಿಗೆ ಕಡತಗಳನ್ನು ಲಾಡ್ಜ್ ಗೆ ತರಿಸಿಕೊಂಡು ಪರಿಶೀಲನೆ ನಡೆಸಿದ್ದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ ಎಂದು ಎಚ್ ಎಮ್ ಬಾಬು ಆರಪಿಸಿದರು.


[ays_poll id=3]