This is the title of the web page
This is the title of the web page
Crime NewsNational News

ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ..?


K2kannadanews.in

gang rape & Murder : ಪತಿಯೊಬ್ಬ (Person)ತನ್ನ ಅಣ್ಣಂದಿರೊಂದಿಗೆ (Brothers) ಸೇರಿ ತನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ (gang rape) ಎಸಗಿ, ಕೊಲೆಗೈದ (Murder) ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ (Utter Pradesh) ಫತೇಪುರ್‌ನ ನೀರಿನ ತೊಟ್ಟಿಯಲ್ಲಿ (Water tank) ಮಹಿಳೆಯ ದೇಹವು ವಿರೂಪಗೊಂಡ ಮತ್ತು ಬೆತ್ತಲೆ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕೆಲವು ಸ್ಥಳೀಯ ನಿವಾಸಿಗಳು ಗಮನಿಸಿದಾಗ ಅಪರಾಧದ ತನಿಖೆಯು ಪ್ರಗತಿಯನ್ನು ಪಡೆದುಕೊಂಡಿತು. ಯುಪಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, 4 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಸಂತ್ರಸ್ತೆಯ ಸೋದರ ಮಾವಂದಿರಾಗಿದ್ದಾರೆ.

ಐದನೇ ಆರೋಪಿಗಾಗಿ ಶೋಧ ನಡೆಯುತ್ತಿದೆ. ಬಂಧಿತ ನಾಲ್ವರು ಆರೋಪಿಗಳನ್ನು ರೋಹಿತ್ ಲೋಧಿ, ರಾಮಚಂದ್ರ ಅಲಿಯಾಸ್ ಪುಟ್ಟು, ಶಿವಂ ಅಲಿಯಾಸ್ ಪಂಚಮ್ ಮತ್ತು ಸೋನು ಲೋಧಿ ಎಂದು ಗುರುತಿಸಲಾಗಿದೆ. ಪ್ರಕರಣದ ಐದನೇ ಆರೋಪಿ, ಮಹಿಳೆ ಪತಿ ನಾಂಕು ಲೋಧಿ ಪರಾರಿಯಾಗಿದ್ದಾನೆ. ಮಹಿಳೆಯ ಪತಿಯ ಸೂಚನೆಯ ಮೇರೆಗೆ ನಾವು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ತಪ್ರೊಪ್ಪಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ.


[ays_poll id=3]