This is the title of the web page
This is the title of the web page
State News

ಶಕ್ತಿನಗರ ಕೃಷ್ಣಾ ಸೇತುವೆ ಮೇಲೆ ಜ.10 ಸಂಚಾರ ನಿಷೇಧ..


K2kannadanews.in

ರಾಯಚೂರು : ಕೃಷ್ಣಾ ನದಿಯಲ್ಲಿ (Krishna River) ನಿರ್ಮಿಸಲಾದ ಬ್ರಿಟೀಶ್ (British time) ಕಾಲದ ಸೇತುವೆ, ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA) ಕೈಗೆತ್ತಿಕೊಂಡಿರುವ ಕಾರಣ ಜ.10ರಿಂದ 45 ದಿನಗಳ (45 Days) ವರಗೆ ಶಕ್ತಿನಗರ ಕೃಷ್ಣಾ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಡಿವೈಎಸ್‌ಪಿ ಸತ್ಯನಾರಾಯಣರಾವ್ ತಿಳಿಸಿದರು.

ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿ ಕೃಷ್ಣಾ ಸೇತುವೆ(Krishna bridge) ಹಾಳಾಗಿರುವ ಹಿನ್ನಲೆ, ತುರ್ತು ದುರಸ್ತಿ ಕಾಮಗಾರಿ (Riper work) ಹಿನ್ನೆಲೆ ಪೂರ್ವಭಾವಿ ಸಭೆ ಮಾಡಲಾಯಿತು. ಕರ್ನಾಟಕ ಹಾಗೂ ತೆಲಂಗಾಣದ ಗಡಿಯಲ್ಲಿರುವ ಶಕ್ತಿನಗರ ಸಮೀಪ ರಾಯಚೂರು- ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆ ತಲುಪಿದೆ ಎಂದರು. ಈ ಮಾರ್ಗದಲ್ಲಿ ಭಾರಿ ವಾಹನಗಳು ಓಡಾಡುವುದರಿಂದ ಸೇತುವೆಗೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಚರ್ಚಿಸಿ ಮಾರ್ಗ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ ವಾಹನಗಳು ಸೇತುವೆ ಮಧ್ಯೆ ಕೆಟ್ಟು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಕೆಟ್ಟು ನಿಂತ ವಾಹನ ಸ್ಥಳಾಂತರಗೊಳಿಸುವ ವರೆಗೂ ಈ ಮಾರ್ಗದಲ್ಲಿ ಸಂಚರಿಸುವವರು ಗಂಟೆಗಟ್ಟಲೇ ನಿಲ್ಲಬೇಕಾದ ಪರಿಸ್ಥಿತಿ ಇತ್ತು ಎಂದು ಹೇಳಿದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಸಾರಿಗೆ ಸಂಸ್ಥೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸುಧೀರ್ಘ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗಿದೆ ಎಂದುರು.


[ays_poll id=3]