
K2 ನ್ಯೂಸ್ ಡೆಸ್ಕ್ : ಐದು ಗ್ಯಾರೆಂಟಿಗಳಲ್ಲಿ ಒಂದಾಗಿದ್ದ 200 ಯೂನಿಟ್ ವಿದ್ಯುತ್ ಉಚಿತ ಯೋಜನೆ ಜಾರಿ ಮಾಡಿದ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ರಾಜ್ಯದ ಜನರ ನಿದ್ದೆಗೆಡಿಸಿದೆ. ಪ್ರತಿ ಯೂನಿಟಿಗೆ 1.50 ಪೈಸೆ ದರ ಹೆಚ್ಚಿಸಿದೆ. ಇತ್ತಿಚಿಗಷ್ಟೇ ಸರ್ಕಾರ ಕೊಟ್ಟ ಭರವಸೆಯಂತೆ 200 ಯೂನಿಟ್’ವರೆಗೆ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಉಚಿತ ಕರೆಂಟ್ ಅನುಭವಿಸಿ ಕೃಷಿ ಪಡುವುದರೊಳಗೆ ಸರ್ಕಾರ ಶಾಕ್ ನೀಡಿದೆ. ಸದ್ಯ ಕೆಇಆರ್‌ಸಿ, ಪ್ರತಿ 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಿದ್ದು, ವಿದ್ಯುತ್ ಸರಬರಾಜು ಮಾಡುವ 5 ನಿಗಮಗಳಲ್ಲೂ ಹೆಚ್ಚಳ ಮಾಡಿದೆ. ಸದ್ಯ ಡಿಸೆಂಬರ್ ವರೆಗಿನ ವಿದ್ಯುತ್ ಬೆಲೆ ಏರಿಕೆ ದರ ಪಟ್ಟಿ ಹರಿದಾಡುತ್ತಿದ್ದು, ಇದರ ಪ್ರಕಾರ ಮುಂದಿನ 6 ತಿಂಗಳಿನವರೆಗೂ ಗ್ರಾಹಕರಿಗೆ ದರ ಏರಿಕೆ ಶಾಕ್ ತಪ್ಪಿದ್ದಲ್ಲ. ಮೇ 12 ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಿತ್ತು. ಜೂ.1 ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್‌ಸಿ ಹೇಳಿತ್ತು. ಚುನಾವಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದೆ.
![]() |
![]() |
![]() |
![]() |
![]() |
[ays_poll id=3]