This is the title of the web page
This is the title of the web page
National News

ಆಧಾರ್ ಕಾರ್ಡ್ ನವೀಕರಣ ಜೂನ್ 14 ಕೊನೆಯ ದಿನ 14 ನಂತರ ಶುಲ್ಕ ವಿಧಿಸಲಿದೆ ಸರ್ಕಾರ


K2 ನ್ಯೂಸ್ ಡೆಸ್ಕ್ : ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷಗಳು ಪೂರ್ಣಗೊಂಡಿದ್ದರೆ. ಅದನ್ನು ಉಚಿತವಾಗಿ ನವೀಕರಿಸಲು ಇದೇ ಜೂನ್ 14 ಕೊನೆಯ ದಿನವಾಗಿದೆ. 14ರ ನಂತರ ಶುಲ್ಕ ವಿಧಿಸುವ ಸಾಧ್ಯತೆಗಳು ಇವೆ.

ಆಧಾರ್ ಕಾರ್ಡ್ ಹೊಂದಿರುವವರು ಜೂನ್ 14 ರೊಳಗೆ ತಮ್ಮ ಆಧಾರ್ ವಿವರಗಳನ್ನು ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಉಚಿತವಾಗಿ ನವೀಕರಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐವು ನಾಗರಿಕರಿಗೆ ತಮ್ಮ ಆಧಾರ್‌ನಲ್ಲಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಶುಲ್ಕ ವಿಧಿಸುವುದಿಲ್ಲ. ಜೂನ್ 14 ರ ನಂತರ ಆಧಾರ್ ಅಪ್ಲೇಟ್ ಮಾಡುವವರು ಶುಲ್ಕ ಪಾವತಿಸಬೇಕಾಗುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್ ಅಪ್ಲೇಟ್ ಮಾಡುವ ಸೇವೆಯ ಲಾಭವನ್ನು ಪಡೆಯಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ https://myaadhaar .uidai.gov.in ನಲ್ಲಿ ಮಾರ್ಚ್ 15 ರಿಂದ ಜೂನ್ 14 ರ ವರೆಗೆ ಉಚಿತವಾಗಿ ನವೀಕರಿಸಬಹುದು ಎಂದು ಈ ಹಿಂದೆ ಯುಐಡಿಎಐ ಟ್ವಿಟ್ ಮಾಡಿತ್ತು. ಜೂನ್ 14 ರ ವರೆಗೆ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. ನಂತರ ನೀವು ಆಧಾರ್ ಅಪ್ಲೇಟ್ ಮಾಡಲು 50 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್ ಮೂಲಕವೋ ಅಥವಾ ಸ್ಥಳೀಯ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ವಿವರಗಳನ್ನು ನವೀಕರಿಸಲು ಅವಕಾಶ ಇದೆ.


[ays_poll id=3]