
ಸಿಂಧನೂರು : ಮಳೆಯ ಕೊರತೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಬರಗಾಲ ಪೀಡಿತವಾಗಿದೆ. ರೈತರು ಸಾಕಷ್ಟು ಸಂಕಟ ಸಂಕಟದಲ್ಲಿದ್ದಾರೆ. ರಾಜ್ಯ ಸರ್ಕಾರ ಭಾಗ್ಯಗಳ ಸೋಗಲಾಡಿತನದಲ್ಲಿ ರೈತರ ನಿರ್ಲಕ್ಷ್ಯಿಸುತ್ತಿದೆ ಎಂದು ರೈತ ಮುಖಂಡ ಅಮೀನ್ ಸಾಬ್ ದಿದ್ದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ರೈತ ಮುಖಂಡ ಅಮಿನ್ ಸಾಬ್ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಭಾಗ್ಯಗಳನ್ನು, ಗ್ಯಾರಂಟಿಗಳನ್ನ ಜಾರಿ ಮಾಡುವತ್ತ ಗಮನ ಹರಿಸಿದೆ ಹೊರತು, ರೈತರ ಕಷ್ಟಗಳಿಗೆ ಕಿವಿ ಕೊಡುತ್ತಿಲ್ಲ. ಆಗಸ್ಟ್ ಮುಗಿದಿದೆ ಮಳೆರಾಯನ ದರ್ಶನವಾಗಿಲ್ಲ ಹಾಕಿದ ಬೆಳೆಗಳು ಒಣಗಿ ಹೋಗಿವೆ. ಬರಗಾಲ ಘೋಷಿಸಬೇಕಾದ ಸರ್ಕಾರ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೊಂದು ಕಡೆ ಬ್ಯಾಂಕುಗಳು ರೈತರು ಅಡವಿಟ್ಟ, ಬೆಳ್ಳಿ ಬಂಗಾರಗಳನ್ನ ಹರಾಜು ಹಾಕುವ ಕೆಲಸಕ್ಕೆ ಮುಂದಾಗಿದ್ದು, ರೈತರುಗಳಿಗೆ ನೋಟಿಸ್ ನೀಡುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಯೋಚನೆ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
![]() |
![]() |
![]() |
![]() |
![]() |
[ays_poll id=3]