This is the title of the web page
This is the title of the web page
State NewsVideo News

ರಾಯಚೂರು ಜಿಲ್ಲೆಯಲ್ಲಿ ನಕಲಿ ನೋಟುಗಳದ್ದೆ ಕಾರುಬಾರು..


ರಾಯಚೂರು : ಬಡ ಜನರ ಹೊಟ್ಟೆ ಹೊಡೆಯುತ್ತಿದೆ ಖೋಟಾನೋಟು. ದಿನಕ್ಕೆ ದುಡಿಯುವುದೇ 200, 300ರೂಪಾಯಿ, ಅದರಲ್ಲಿ ಒಂದು ಖೋಟಾನೋಟು ಬಂದರೆ ಮಾಡುವುದಾದರೂ ಏನು ಎನ್ನುತ್ತಾರೆ ವ್ಯಾಪಾರಸ್ಥರು. ಹೀಗೆ ಖೋಟಾನೋಟುಗಳ ಹಾವಳಿ ಮಿತಿಮೀರಿ ಹೋಗಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೆಕಾದವರು ಯಾರು ಎಂಬುದೇ ಪ್ರಶ್ನೆಯಾಗಿದೆ.

ಹೌದು ರಾಯಚೂರು ಜಿಲ್ಲೆಯಲ್ಲಿ ಈ ಒಂದು ಖೋಟಾನೋಟುಗಳ ಹಾವಳಿ ಮಿತಿಮೀರಿ ಹೋಗಿದೆ. ಇತ್ತೀಚಿಗೆ ರಾಯಚೂರು ನಗರದಲ್ಲಿಯೂ ಕೂಡ ಇದರ ಹಾವಳಿ ಹೆಚ್ಚಾಗಿದೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು, ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಅಕ್ರಮ ನೋಟು ಚಲಾವಣೆ ಮಾಡುವವರ ಟಾರ್ಗೆಟ್, ನಗರದ ಎಪಿಎಂಸಿ ಗಂಜ್, ತರಕಾರಿ ವ್ಯಾಪಾರಸ್ಥರು ಮತ್ತು ಕಲೆಕ್ಷನ್ ಮಾಡುವ ಹುಡುಗರು. ನಗರದ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಡೆಯುವ ಹೋಲ್ಸೇಲ್ ಮಾರಾಟದಲ್ಲಿ ನೋಟುಗಳು ಪತ್ತೆಯಾಗಿವೆ, ನಿನ್ನೆಯಷ್ಟೇ ರಜನಿಕಾಂತ್ ರೆಡ್ಡಿ ಎಂಬುವ ಕೂಲ್ ಡ್ರಿಂಕ್ಸ್ ಮಾಲೀಕರಿಗೂ ಈ ಒಂದು ಖೋಟಾನೋಟು ಪತ್ತೆಯಾಗಿರುವ ಬಗ್ಗೆ ಅವರು ಹೇಳೋದು ಹೀಗೆ.


[ays_poll id=3]