This is the title of the web page
This is the title of the web page
National NewsVideo News

ಕಾಳಿಂಗ ಸರ್ಪ ಶ್ವಾನಗಳೊಂದಿಗೆ ಏಕಾಂಗಿ ಹೋರಾಟದ ರೋಚಕ ವೀಡಿಯೋ..!


K2kannadanews.in

Viral Video News Desk : ಕಾಳಿಂಗ ಸರ್ಪ (King cobra) ಅಂದ್ರೆ ನಮಗೆ ಮೊದಲು ಕಣ್ಣಿಗೆ ಬರುವುದು 12 ಅಡಿ ಉದ್ದದ ಹಾವು ಅನ್ನೋದು. ಇದನ್ನು ನೋಡೊದು ದೂರ, ಹೆಸರು ಕೇಳಿದರೆ ಸಾಕು ಅನೇಕರು ಭಯಪಡುತ್ತಾರೆ (Fiar). ಎದುರಿಗೆ ಬಂದ್ರೆ ಮುಗಿತು ಕತೆ. ಆದರೆ ನಾಯಿಗಳು (Dog) ಹಾಗಲ್ಲ. ಅಪಾಯ (Danger) ಗೊತ್ತಿದ್ದರೂ ಕಾದಾಟಕ್ಕೆ ಇಳಿಯುತ್ತವೆ. ನಾಯಿ ಹಾವಿನ ಕಾಳಗ ನೋಡಿ.

ವಿಡಿಯೊ ನೋಡಿ ಹಲವರು ವಿವಿಧ ರೀತಿಯ ಕಮೆಂಟ್‌ (Comment) ಮಾಡಿದ್ದಾರೆ. ಪ್ರಾಣಿ ಜಗತ್ತಿನಲ್ಲಿ ಪರಸ್ಪರ ಬೇಟೆ, ಕಾದಾಟ ಸಾಮಾನ್ಯವಾದರೂ ಈ ವಿಡಿಯೊ ಹಲವರಿಗೆ ಕಳವಳವನ್ನುಂಟು ಮಾಡಿದೆ. ಕೆಲವರು ಶ್ವಾನಗಳ ಸುರಕ್ಷತೆ (safety) ಬಗ್ಗೆ ಯೋಚಿಸಿದರೆ ಇನ್ನು ಕೆಲವರು ಹಾವಿನ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.

ಇಸ್ಟಾಗ್ರಾಮ್‌ನಲ್ಲಿ (Instagram) ಈ ವಿಡಿಯೊವನ್ನು ಪೋಸ್ಟ್‌ (Post) ಮಾಡಲಾಗಿದೆ. ಲಕ್ಷಾಂತರ ಮಂದಿ ಉಸಿರು ಬಿಗಿ ಹಿಡಿದು ಈ ಭೀಕರ ಕಾಳಗವನ್ನು ವೀಕ್ಷಿಸಿದ್ದಾರೆ. ಸುತ್ತಮುತ್ತಲು (Sardou ending) ಪೊದೆಗಳಿರುವ ಬಯಲು ಪ್ರದೇಶ ಅದು. ಅಲ್ಲಿ ಹರಿದಾಡುತ್ತಿರುವ ಕಾಳಿಂಗ ಸರ್ಪವನ್ನು ತೋರಿಸುವ ಮೂಲಕ ವಿಡಿಯೊ (Video) ಆರಂಭವಾಗುತ್ತದೆ. ಆ ಮಾರುದ್ದದ ಹಾವಿನ ಸುತ್ತ ನಿಂತುಕೊಂಡಿರುವ 5 ಬೀದಿ ನಾಯಿಗಳು (stary dog) ಏಕ ಕಾಲಕ್ಕೆ ದಾಳಿ ನಡೆಸುತ್ತವೆ. ಒಂದು ಬಾಲ ಕಚ್ಚಿ ಎಳೆದರೆ, ಇನ್ನೊಂದು ದೇಹದ ಮಧ್ಯ ಭಾಗಕ್ಕೆ ಬಾಯಿ ಹಾಕುತ್ತದೆ. ಇನ್ನೊಂದು ತಲೆಯ ಹತ್ತಿರ ಆಕ್ರಮಣ ಮಾಡಲು ಮುಂದಾಗುತ್ತದೆ.

 


[ays_poll id=3]