This is the title of the web page
This is the title of the web page
Crime NewsLocal News

ಮಿತಿ ಮೀರಿದ ಬಿಸಿಲು : ಬಿಸಿಲಿನ ತಾಪಕ್ಕೆ ವೃದ್ಧ ಬಲಿ..?

Oplus_0

K2kannadanews.in

heatstroke ಲಿಂಗಸುಗೂರು : ಪಟ್ಟಣದ‌ ಬಸ್ ನಿಲ್ದಾಣದಲ್ಲಿ (Bus stand) ವೃದ್ಧನೊಬ್ಬ (old man) ಬಿಸಿಲಿನ ತಾಪಕ್ಕೆ ಮೃತಪಟ್ಟಿದ್ದಾನೆ, ಬಿಸಿಲಿನ ತಾಪದಿಂದ ಅಸ್ವಸ್ಥಗೊಂಡಿರಬೇಕು ಎಂದು ಶಂಕಿಸಲಾಗಿದೆ.

ರಾಯಚೂರು (Raichur) ಜಿಲ್ಲೆಯ, ಲಿಂಗಸುಗೂರು (Lingasugur) ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮಸ್ಕಿ (Maski) ತಾಲ್ಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ (Krishnappa 62) ಅವರು ಅನಾರೋಗ್ಯದ ಕಾರಣ, ಚಿಕಿತ್ಸೆಗಾಗಿ (Treatment) ಲಿಂಗಸುಗೂರು ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಿಂದ (Hospital) ಬಸ್‌ ನಿಲ್ದಾಣಕ್ಕೆ ಬಂದಿದ್ದ ವೇಳೆ ಬಿಸಿಲಿನ ತಾಪ ತಾಳದೇ ಮೃತಪಟ್ಟಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ರಾಯಚೂರಿನಲ್ಲಿ ಬುಧವಾರ (Wednesday) ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇ‌ನ್ನೂ ಸ್ಥಳಕ್ಕೆ ಡಿವೈಎಸ್ಪಿ (DYSP) ದತ್ತಾತ್ರೇಯ ಕಾರ್ನಾಡ್‌ ಹಾಗೂ ಪೊಲೀಸ್ (Police) ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು (Dead body) ಕುಟುಂಬದವರಿಗೆ ಹಸ್ತಾಂತರಿಸಿದ್ದು ಯಾವುದೇ ದೂರು ದಾಖಲಾಗಿಲ್ಲ. ಬಿಸಿಲಿನ ತಾಪದಿಂದಲೇ ಮೃತಪಟ್ಟಿದ್ದಾರೆಯೇ ಎಂಬ ಕುರಿತು ವೈದ್ಯರು ಖಚಿತಪಡಿಸಿಲ್ಲ.


[ays_poll id=3]