This is the title of the web page
This is the title of the web page
Health & FitnessNational NewsVideo News

ನೀವು ತಿನ್ನೋ ದ್ರಾಕ್ಷಿ ವಿಷವಾಗಿದೆ ಅಂದ್ರೆ ನಂಬ್ತೀರಾ : ಈ ವೀಡಿಯೋ ನೋಡಿ..?


K2kannadanews.in

Viral Videi News : ದ್ರಾಕ್ಷಿಗಳಿಗೆ (Grapes) ಬೇಗನೆ ಕೊಳೆಯದಿರಲಿ, ಫ್ರೇಷ್ (Fresh) ಆಗಿ ಕಾಣಲಿ ಎಂದು ವಿಷವನ್ನೂ (poisoning) ಹಾಕಿ ಮಾರುಕಟ್ಟೆಯಲ್ಲಿ (Sale in market) ಮಾರಾಟ ಮಾಡಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ X ನಲ್ಲಿ ವೀಡಿಯೋ ಇದೀಗ ವೈರಲ್ ಆಗಿದೆ.

ಪ್ರಸ್ತುತ ಈ ವೀಡಿಯೋ (Video) ಎಲ್ಲಿಯದು ಎಂಬ ಮಾಹಿತಿ ದೊರೆತಿಲ್ಲ, ದ್ರಾಕ್ಷಿ ತೋಟದಿಂದ ಕ್ವಿಂಟಲ್‌ಗಟ್ಟಲೆ ದ್ರಾಕ್ಷಿ ತಂದು ಅದನ್ನು ಒಂದು ಬುಟ್ಟಿಯಲ್ಲಿ ಕೆಮಿಕಲ್‌ (Comical) ಕಲೆಸಿರುವ ನೀರಿನಲ್ಲಿ ಅದ್ದಿ ಅದ್ದಿ ಎತ್ತಿಡುತ್ತಾರೆ, ಈ ವೀಡಿಯೋ ನೋಡುವಾಗ ಖಂಡಿತ ಭಯವಾಗುತ್ತೆ, ಅಯ್ಯೋ ಇಂಥ ದ್ರಾಕ್ಷಿ ತಿನ್ನುವುದರಿಂದ ಪ್ರಯೋಜನವೇನು ಎಂದು ಅನಿಸದೆ ಇರಲ್ಲ. ಇದು ಬರೀ ದ್ರಾಕ್ಷಿಯ ಕತೆಯಲ್ಲ, ಬುತೇಕ ಹಣ್ಣುಗಳು ಮಾರುಕಟ್ಟೆಗೆ ಬರುವಾಗ ಅವುಗಳಲ್ಲಿ ಎಷ್ಟು ಗುಣಗಳಿರುತ್ತದೋ ಅಷ್ಟೇ ವಿಷವೂ ಸೇರಿರುತ್ತದೆ ಎಂಬುವುದಕ್ಕೆ ಇಂಥ ಹಲವಾರು ವೀಡಿಯೋಗಳು ಸಾಕ್ಷಿ.

ಆದ್ರೆ ಮನೆಗೆ(Home) ತರುವ ದ್ರಾಕ್ಷಿ ಮನೆಗೆ ತಂದ ಮೇಲೆ ಹರಿಯುವ ನೀರಿನಲ್ಲಿ (wash in water) ದ್ರಾಕ್ಷಿಯನ್ನು ತೊಳೆಯಿರಿ. ಈ ರೀತಿ ತೊಳೆಯುವುದರಿಂದ ಶೇ. 85ರಷ್ಟು ಬ್ಯಾಕ್ಟಿರಿಯಾ (Bacteria), ವಿಷಾಂಶ ದೂರಾಗುವುದು. ನಂತರ 20 ನಿಮಿಷ (minutes) ನೀರಿನಲ್ಲಿ ಹಾಕಿಡಿ. ಬಳಿಕ ಮತ್ತೊಮ್ಮೆ ನೀರಿನಲ್ಲಿ ತೊಳೆದ ಬಳಿಕವಷ್ಟೆ ಬಳಸಿ. ಅದರ ಸಿಪ್ಪೆ ಸುಲಿದು ತಿನ್ನುವುದು ಒಳ್ಳೆಯದು ಆದ್ರೆ ಅದು ಕಷ್ಟ.

ದ್ರಾಕ್ಷಿಯನ್ನು ತೊಳೆದ ಬಳಿಕ ಟವಲ್‌ನಿಂದ (Travel) ಮೆಲ್ಲನೆ ಒರೆಸಿ ಇಡಿ, ಈ ರೀತಿ ಮಾಡುವುದರಿಂದ ದ್ರಾಕ್ಷಿ ಬೇಗನೆ ಹಾಳಾಗುವುದಿಲ್ಲ. ನೀವು ದ್ರಾಕ್ಷಿ ತೊಳೆದ ಬಳಿಕ ಒಂದು ಪಾತ್ರೆಯಲ್ಲಿ ನೀರು, ವಿನೆಗರ್ (Vinegar) ಹಾಕಿ ಅದರಲ್ಲಿ ದ್ರಾಕ್ಷಿ ತೊಳೆದರೆ ವಿಷಾಂಶ ತೆಗೆಯಲು ಸಹಕಾರಿ ಆಗುತ್ತದೆ.


[ays_poll id=3]