
K2 ಹೆಲ್ತ್ ಟಿಪ್ : ಪ್ರಸ್ತುತ ದಿನಗಳಲ್ಲಿ ಜನರು ತೂಕ ಹೆಚ್ಚಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವರು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಆದರೆ ಅದರ ಬದಲು ನೀವು ಮನೆಯಲ್ಲಿಯೇ ಈ ಕೆಲಸ ಮಾಡಿದರೆ ನೀವು ನಿಮ್ಮ ತೂಕವನ್ನು ಸುಲಭವಾಗಿ ಇಳಿಸಬಹುದು.
ವಾಕಿಂಗ್ : ನೀವು ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ. ಇದು ನಿಮಗೆ ಹಲವು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ.
ಜಾಗಿಂಗ್ : ತೂಕ ನಷ್ಟಕ್ಕೆ ಜಾಗಿಂಗ್ ತುಂಬಾ ಉತ್ತಮವಾಗಿದೆ. ಇದು ಕಾಲುಗಳನ್ನು ಬಲಪಡಿಸುತ್ತದೆ. ಮತ್ತು ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
ಸೈಕ್ಲಿಂಗ್ : ಸೈಕ್ಲಿಂಗ್ ತೂಕ ಇಳಿಸಲು ಸಹಕಾರಿಯಾಗಿದೆ. ಇದು ನಿಮ್ಮ ದೇಹವನ್ನು ಫಿಟ್ ಆಗಿ ಇಡುತ್ತದೆ. ಹಾಗಾಗಿ ಪ್ರತಿದಿನ ಸೈಕ್ಲಿಂಗ್ ಮಾಡಿ.
ಈಜು : ನೀವು ಪ್ರತಿದಿನ 30 ನಿಮಿಷಗಳ ಕಾಲ ಈಜುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಸುಡಬಹುದು. ಇದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಉತ್ತಮವಾಗಿಡುತ್ತದೆ.
ಸಾಮಾನ್ಯವಾಗಿ ಇಷ್ಟನ್ನು ನಾವು ಮಾಡಿದರೆ ನಮ್ಮ ತೂಕವನ್ನು ತಗ್ಗಿಸಬಹುದು. ಇದೆಲ್ಲವುಗಳ ಜೊತೆ ಪ್ರಮುಖವಾಗಿ ನಮ್ಮ ಆಹಾರ ಪದ್ಧತಿಯು ಕೂಡ ಸಮತೋಲನೆಯಲ್ಲಿ ಇರಬೇಕು ಅಂದರೆ ಸರಿಯಾದ ಸಮಯಕ್ಕೆ ಬಹಳ ಊಟ ಮಾಡಬೇಕು.
![]() |
![]() |
![]() |
![]() |
![]() |
[ays_poll id=3]