This is the title of the web page
This is the title of the web page
Politics NewsState News

ಡಿಕೆಶಿ ಅಕ್ರಮ ಆಸ್ತಿ ಪ್ರಕರಣ : ರಾಜಕೀಯ ದುರುದ್ದೇಶದಿಂದ ಬಿಜೆಪಿ ಸಿಬಿಐಗೆ ಆದೇಶ


K2kannadanews.in

ರಾಯಚೂರು : ಡಿಕೆ ಶಿವಕುಮಾರ್(D k shivakumar) ಅಕ್ರಮ ಆಸ್ತಿ ಪ್ರಕರಣ, ರಾಜಕೀಯ ದುರುದ್ದೇಶದಿಂದ ಬಿಜೆಪಿ(BJP) ಸಿಬಿಐ(CBI) ತನಿಖೆಗೆ ಆದೇಶ ಮಾಡಿತ್ತು. ಈ ಹಿನ್ನಲೆ ಸಚಿವ ಸಂಪುಟದಲ್ಲಿ ಕುಲಂಕುಷವಾಗಿ ಚರ್ಚೆಮಾಡಿ ಸಿಬಿಐ ಆದೇಶ ಹಿಂಪಡೆಯಲಾಗಿದೆ ಎಂದು ರಾಯಚೂರು(Raichur) ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣು ಪ್ರಕಾಶ ಪಾಟೀಲ್ ಹೇಳಿದರು.

ಸಚಿವ ಸಂಪುಟದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಡಿ.ಕೆ ಶಿವಕುಮಾರ್ ಸಿಬಿಐ ಆದೇಶ ಹಿಂಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಹಿಂದಿನ ಬಿಜೆಪಿ ಸರಕಾರ ರಾಜಕೀಯ ಸೇಡಿನಿಂದ(political revenge)ನಿರ್ಣಯ ತೆಗೆದುಕೊಡಿತ್ತು. ರಾಜಕೀಯ ದುರುದ್ದೇಶದಿಂದ ಬಿಜೆಪಿ ಸಿಬಿಐ ತನಿಖೆಗೆ ಆದೇಶ ಮಾಡಿತ್ತು. ತನಿಖೆಗು ಮುಂಚೆ ಅಡ್ವಕೇಟ್ ಜ‌ನರಲ್ ಅವರಿಂದ ಮಾಹಿತಿ ಪಡೆದಿಲ್ಲ. ಡ್ಯೂ ಡೆಲಿಗೆಷನ್ ಮಾಡಿಲ್ಲ ಮತ್ತು ಇಲಾಖೆ ಮಾಹಿತಿ ಪಡೆದಿರಲಿಲ್ಲ. ಅಲ್ಲದೇ ಇಡಿ ಇಲಾಖೆ ಡಿ.ಕೆ.ಶಿವಕುಮಾರ್ ಅವರ ಪ್ರಕರಣ ಸಿಬಿಐ ತನಿಖೆಗೆ ಕೊಡಲು ಹೇಳಿಲ್ಲ. ದೆಹೆಲಿಯಿಂದ ಬಂದ ಮೌಕಿಕ ಆದೇಶ ಹಿನ್ನಲ್ಲಿ ಹಿಂದಿನ ಮುಖ್ಯಮಂತ್ರಿಗಳು ಮೌಕಿಕ ಆದೇಶದ ಮೇಲೆ ರಾಜಕೀಯ ಒತ್ತಡದಲ್ಲಿ ನಿರ್ಣಯ ತೆಗೆದುಕೊಂಡಿತ್ತು ಎಂದು ಹೇಳಿದರು.


[ays_poll id=3]