ಜಾಲಹಳ್ಳಿ: ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ಚರಂಡಿ ಮತ್ತು ಅನಧಿಕೃತ ಗುಜರಿ ಅಂಗಡಿಯಿಂದ ಕೊಳಚೆ ನೀರು ಸಂಗ್ರಹವಾಗಿ ಡೆಂಗ್ಯೂ ಮಹಾಮಾರಿ ಮತ್ತು ಮಲೆರಿಯಾ ರೋಗ ಉಲ್ಬಣಗೊಂಡು ನಾಲ್ಕೈದು ಮಕ್ಕಳಲ್ಲಿ ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರ ಕಂಡುಬಂದಿದೆ.
ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ವಿರುದ್ಧ ಡಿವೈಎಫ್ಐ ಮತ್ತು ಪ್ರಾಂತ ರೈತ ಸಂಘಟನೆ ಮುಖಂಡರು ಆಕ್ರೋಶಗೊಂಡು ದವಾಖಾನೆಗೆ ದೂರಿದರು.
ಮಳೆಗಾಲ ಬಂತೆಂದರೆ ಎಲ್ಲರ ಎದೆಯಲ್ಲಿ ಡವಡವ. ಹೌದು ಸುರಿಯುತ್ತಿರುವ ಮೊದಲ ಮಳೆಗೆ ಅದೆಷ್ಟೋ ಜನ ಸಣ್ಣ ಪುಟ್ಟ ಖಾಯಿಲೆಗಳಿಗೆ ತುತ್ತಾಗುತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಎಂಬ ಮಹಾಮಾರಿಯೊಂದು ಎಲ್ಲರ ಮನೆ ಕದ ತಟ್ಟುತಿದೆ.
ಏನಿದು ಡೆಂಗ್ಯೂ: ಸೋಂಕಿತ ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವೈರಸ್ ನಿಂದ ಬರುವ ರೋಗವಾಗಿದೆ. ಈಗಾಗಲೇ ಪಕ್ಕದ ಮಾನ್ವಿ ಯಲ್ಲಿ ಜೀಖಾ ವೈರಸ್ ಪತ್ತೆಯಾಗಿರುವುದು ರಿಂದ ನಾಗರಿಕರಿಗೆ ಆತಂಕ ಸೃಷ್ಟಿಯಾಗಿದೆ .
ತುರ್ತು ಸಭೆ :ಇಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂ ಅಧ್ಯಕ್ಷರಾದ ಅಯ್ಯಪ್ಪಸ್ವಾಮಿ ವೈದ್ಯಧಿಕಾರಿಗಳಾದ RS ಹುಲಿಮನಿ ಮಂಜುನಾಥ ಅವರ ನೇತೃತ್ವದಲ್ಲಿ ಸಭೆಯನ್ನು ಕರೆದು ಸಮುದಾಯ ಆರೋಗ್ಯ ಕೇಂದ್ರದ ಸ್ವಚ್ಚತೆ ಬಗ್ಗೆ ಗಮನ ಹರಿಸಬೇಕು ಹಾಗೆ ಎಲ್ಲಾ ವಾರ್ಡಗಳಲ್ಲಿ ಸೊಳ್ಳೆಗಳ ಕಾಟ ತಪ್ಪಿಸಲು ಫಾಗಿಂಗ್ ಮಾಡಬೇಕು ಎಂದು ತಾಕಿತು ಮಾಡಲಾಯಿತು.
ಇಷ್ಟಕ್ಕೂ ಸುಮ್ಮನಾಗದ ಮುಖಂಡರು ತಕ್ಷಣ ಗುಜರಿ ಅಂಗಡಿಯನ್ನ ಬೇರೆಡೆ ಸ್ಥಳಾಂತರಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೋಲೀಸ್ ಠಾಣೆಗೆ ಬೇಟಿ ನೀಡಿದರು,
ಇದೆ ಸಂದರ್ಭದಲ್ಲಿ ಗ್ರಾಮ ಪಂ ಸದಸ್ಯರಾದ ಮಕ್ತುಂಪಾಷ ರೈತ ಸಂಘಟನೆಯ ಮುಖಂಡರಾದ ಶಬ್ಬೀರ ಜಾಲಹಳ್ಳಿ ಮೌನೇಶ ದಾಸರ ಶಿವಪ್ಪ ಚಿಂಚರಕಿ ಕಲಿಂಪಾಷ DYFI ಅಧ್ಯಕ್ಷರಾದ ರಿಯಾಜ್ ಆರ್ತಿ ಕಾರ್ಯದರ್ಶಿ ರಾಜು ನಾಯಕ ಮುಖಂಡರಾದ ರಿಯಾಜ್ ಖುರೇಷಿ ಸಿರಾಜ್ ಆರೀಪ್ ವಿದ್ಯಾರ್ಥಿ ಮುಖಂಡ ಮಹಾಲಿಂಗ ದೊಡ್ಡಮನಿ ನರಸಪ್ಪ ಮುಂತಾದವರು ಇದ್ದರು.
![]() |
![]() |
![]() |
![]() |
![]() |
[ays_poll id=3]