This is the title of the web page
This is the title of the web page
National NewsSports News

ಕ್ರಿಕೆಟಿಗ ರೋಹಿತ್ ಶರ್ಮಾ ನಿಧನ..!


K2kannadanews.in

Cricketer passed away : ರಾಜಸ್ಥಾನದ (Rajasthan) ಮಾಜಿ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit shrma) ತಮ್ಮ 40ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಾಸ್ತವವಾಗಿ ಇವರು ಬಹಳ ದಿನಗಳಿಂದ ಲೀವರ್‌ (livar problem)ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದೇ ಇಂದು ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ ಕಳೆದ 4, 5 ದಿನಗಳಿಂದ ರೋಹಿತ್ ಅವರಿಗೆ ಲೀವರ್‌ ತೊಂದರೆ ಹೆಚ್ಚಾಗಿದ್ದು. ವೈದ್ಯರಿಂದಲೂ (Doctor) ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ರಾಜಸ್ಥಾನ ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ (Raniji Cricketer) ರೋಹಿತ್ ಶರ್ಮಾ ನಿಧನರಾಗಿದ್ದಾರೆ. 40 ವರ್ಷದ ರೋಹಿತ್, ರಾಜಸ್ಥಾನ ಪರವಾಗಿ ಹಲವು ರಣಜಿ ಪಂದ್ಯಗಳನ್ನು (Matches) ಆಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ (Treatment) ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಇವರ ಹೆಸರು & ಟೀಮ್ ಇಂಡಿಯಾ ನಾಯಕನ ಹೆಸರೂ ಒಂದೇ ತರಹ ಇರುವುದರಿಂದ ಹಿಟ್ ಮ್ಯಾನ್ ಅಭಿಮಾನಿಗಳು ಶಾಕ್ ಆಗಿದ್ದರು. ಫೋಟೋ ನೋಡಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ರಾಜಸ್ಥಾನದ ಮಾಜಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ. 166ರನ್ ಗಳಿಸಿದ್ದರು. ಇದಲ್ಲದೆ, ಇವರು 28ಲಿಸ್ಟ್ ಎ ಪಂದ್ಯಗಳನ್ನು ಸಹ ಆಡಿ. 35.41 ಸರಾಸರಿಯಲ್ಲಿ 850 ರನ್ ಗಳಿಸಿದ್ದರು. ಈ ಬಲಗೈ ಬ್ಯಾಟ್ಸ್‌ಮನ್ 4 ಟಿ-20 ಪಂದ್ಯಗಳಲ್ಲಿ ಭಾಗವಹಿಸಿ 32.75 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ.


[ays_poll id=3]