This is the title of the web page
This is the title of the web page
Health & Fitness

ಆರೋಗ್ಯದ ವಿವಿಧ ಸಮಸ್ಯೆಗಳಿಗೆ ಧನಿಯಾ ಮತ್ತು ಶುಂಠಿ..!


K2 ಹೆಲ್ತ್ ಟಿಪ್ : ತಾಂತ್ರಿಕ ಯುಗದ ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಒಂದಷ್ಟು ಗಮನಹರಿಸುವ ಅವಶ್ಯಕತೆ ಇದೆ. ಸಾಮಾನ್ಯವಾಗಿ ವಾತಾವರಣ ಬದಲಾವಣೆಯಿಂದ ಒಂದಷ್ಟು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅವುಗಳಿಗೆ ಅಡುಗೆ ಮನೆಯಲ್ಲಿಯೇ ಚಿಕಿತ್ಸೆ ಇರುತ್ತದೆ.

* ಜ್ವರ ಬಂದಾಗ ಧನಿಯಾ ಹಾಗೂ ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಧನಿಯಾ ಹಾಗೂ ಕಾಳು ಮೆಣಸಿನ ಪುಡಿಯಿಂದ ತಯಾರಿಸಿದ ಕಷಾಯ ಸೇವಿಸುವುದರಿಂದ ಕಟ್ಟಿದ ಮೂಗಿನಿಂದ ಮುಕ್ತಿ ಸಿಗುತ್ತದೆ.

* ಮೂಲವ್ಯಾದಿ ಸಮಸ್ಯೆ ಹೊಂದಿರುವವರು ಒಂದು ಚಮಚ ಧನಿಯಾವನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಬೆಲ್ಲ ಬೆರೆಸಿ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕ್ರಮೇಣ ಕಡಿಮೆಯಾಗುತ್ತದೆ. ಕನಿಷ್ಠ ಒಂದು ವಾರವಾದರೂ ಇದನ್ನು ಮುಂದುವರಿಸಿದರೆ ಪರಿಣಾಮ ಸ್ಪಷ್ಟವಾಗಿ ಕಂಡುಬರುತ್ತದೆ.

* ವಯಸ್ಸಾದವರಲ್ಲಿ ಮೂತ್ರ ಸರಿಯಾಗಿ ಆಗದಿದ್ದರೆ 5 ರಿಂದ 6 ಧನಿಯಾ ಕಾಳುಗಳನ್ನು ಜಜ್ಜಿ ಅದರ ರಸ ಸೇವಿಸುವುದರಿಂದ ವಿಸರ್ಜನೆ ಸರಿಯಾಗಿ ಆಗುತ್ತದೆ.

* ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದ್ದರೆ ಅಥವಾ ಹುಳಿ ತೇಗು ಬರುತ್ತಿದ್ದರೆ ಇದನ್ನು ನಾಲ್ಕು ಕಾಳು ಬಾಯಿಗೆ ಹಾಕಿ ಜಗಿಯಿರಿ. ಅಥವಾ ಇದರ ಕಷಾಯಕ್ಕೆ ಬೆಲ್ಲ ಬೆರೆಸಿ ಕುಡಿಯಿರಿ.

* ಕೊತ್ತಂಬರಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು
ಮುಂಜಾನೆ ಅದರ ನೀರು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.


[ays_poll id=3]