
ರಾಯಚೂರು : ಗ್ರಾಮಒನ್ ಕೇಂದ್ರವನ್ನು ಬಂದ್ ಮಾಡಿ ಅಲ್ಲನ ಪಾಸ್ವರ್ಡ್ ಬಳಕೆ ಮಾಡಿಕೊಂಡು ಖಾಸಗಿ ಅಂಗಡಿಯವರು ಒಂದು ಅರ್ಜಿಗೆ 200 ರೂಪಾಯಿಯಂತೆ ಹಣ ವಸೂಲಿ ವೇಳೆ ತಹಶೀಲ್ದಾರ್ ದಾಳಿ ನಡೆಸಿ ಅಂಗಡಿ ಸೀಜ್ ಮಾಡಿ, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಹೌದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಾದಾವೂರಿನ ಖಾಸಗಿ ಅಂಗಡಿಯೊಂದರ ಮೇಲೆ ತಹಶೀಲ್ದಾರ್ ದಾಳಿ ಮಾಡಿದ್ದು, ಸಾದಾವೂರಿನ ಗ್ರಾಮ ಒನ್ ಕೇಂದ್ರದಲ್ಲಿ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಗ್ರಾಮಒನ್ ಕೇಂದ್ರವನ್ನು ಬಂದ್ ಮಾಡಿ ಇದರ ಪಾಸ್ವರ್ಡ್ ಬಳಕೆ ಮಾಡಿಕೊಂಡು ಲಕ್ಷ್ಮಿ ಕಂಪ್ಯೂಟರ್ ಎಂಬ ಹೆಸರಿನ ಅಂಗಡಿಯವರು ಒಂದು ಅರ್ಜಿಗೆ 200 ರೂಪಾಯಿಯಂತೆ ಗ್ರಾಮದ ಮಹಿಳೆಯರಿಂದ ಹಣ ವಸೂಲಿ ಮಾಡಿ ಯೋಜನೆಗೆ ನೋಂದಾಯಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಎಲ್.ಟಿ. ಚಂದ್ರಕಾಂತ್ ದಾಳಿ ನಡೆಸಿದ್ದು, ಅಂಗಡಿಯನ್ನು ಸೀಜ್ ಮಾಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]