This is the title of the web page
This is the title of the web page
Local News

ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆ ಅಧ್ಯಕ್ಷರು ವಿಫಲ,ರಾಜೀನಾಮೆಗೆ ಆಗ್ರಹ


ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆ ಅಧ್ಯಕ್ಷರು ವಿಫಲ,ರಾಜೀನಾಮೆಗೆ ಆಗ್ರಹ

ರಾಯಚೂರು : ನಗರದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ನಗರಸಭೆಯ ಅಧ್ಯಕ್ಷರು ಸಂಪೂರ್ಣ ವಿಫಲರಾಗಿದ್ದು, ಕೂಡಲೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ನರಸಿಂಹ ಮಾಡಗಿರಿ ಆಗ್ರಹಿಸಿದರು.

ಅಭಿವೃದ್ಧಿ ಕಾಮಗಾರಿಗಾಗಿ 2021-22 ನೇ ಸಾಲಿಗೆ ಸಾರ್ವಜನಿಕ ಅಭಿವೃದ್ಧಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಸೇರಿ ಒಟ್ಟಾರೆಯಾಗಿ 23 ಕೋಟಿಗಳಿಗೂ ಹೆಚ್ಚಿನ ಮೊತ್ತಕ್ಕೆ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳ ಕಛೇರಿಗೆ ಅನುಮೋದನೆಗಾಗಿ ಕಳುಹಿಸಿ ಸುಮಾರು 17 ತಿಂಗಳು ಕಳೆದರೂ ಕ್ರಿಯಾ ಯೋಜನೆ ಅನುಮೋದನೆಯಾಗದೇ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೇ ದೂಳು ಹಿಡಿದಿವೆ ಇದಕ್ಕೆ ಪ್ರಸ್ತುತ ನಗರಸಭೆಯ ಅಧ್ಯಕ್ಷ ಲಲಿತಾ ಕಡಗೋಲು ಅಂಜೀನಯ್ಯ ಅವರ ನಿರ್ಲಕ್ಷತೆ ಹಾಗೂ ಬೇಜಬ್ದಾರಿಯಿಂದ ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.

ಎಸ್.ಸಿ. ಸಮುದಾಯದ ಕಾಮಗಾರಿಗಳ ರೂ . 41,70,000 ಗಳಿಗೆ ಹಾಗೂ – ಎಸ್.ಟಿ. ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ರೂ.19,26,000 – ಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಯೋಜನಾ ನಿರ್ದೇಶಕರ ಕಛೇರಿಯಿಂದ ನಗರಸಭೆಗೆ ನಾಲ್ಕು ಬಾರಿ ನೋಟೀಸ್ ಜಾರಿ ಮಾಡಲಾಗಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಒಂದು ವಾರದೊಳಗೆ ಕ್ರಿಯ ಯೋಜನೆಗೆ ಅನುಮೋದನೆ ನೀಡದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.


[ays_poll id=3]