This is the title of the web page
This is the title of the web page
Crime NewsState News

ತರಗತಿ ನಡೆಯುತ್ತಿದ್ದಾಗ ಸಿಲಿಂಗ್ ಬಿದ್ದು ವಿದ್ಯಾರ್ಥಿನಿ ಕಾಲಿನ ಬೆರಳು ಕಟ್


K2kannadanews.in

Student’s toe cut ದೇವದುರ್ಗ : ಸರಕಾರಿ ಶಾಲೆಗಳ (Government school) ಅವ್ಯವಸ್ಥೆಗೆ ವಿದ್ಯಾರ್ಥಿಗಳು (Students) ಭಯದ (Fear) ವಾತವರಣದಲ್ಲೆ ಕಲಿಯುವ ಪರೀಸ್ಥಿತಿ ನಿರ್ಮಾಣವಾಗುತ್ತಿದೆ. ತರಗತಿ (Class) ನಡೆಯುತ್ತಿದ್ದಾಗಲೇ ಬಿರುಕು ಬಿಟ್ಟಿದ್ದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿಯ ಕಾಲಿನ ಬೆರಳು ಕಟ್ ಆಗಿರೋ ಘಟನೆ ದೇವದುರ್ಗದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗದ (Devadurga) ಸರ್ಕಾರಿ ಶಾಲೆಯಲ್ಲಿ ಇಂದು ಘೋರ ಅವಘಡ ಸಂಭವಿಸಿದ್ದು. 7ನೇ ತರಗತಿಯ ಸಿಲಿಂಗ್ ಕುಸಿದು ಬಿದ್ದಿದೆ. ಈ ಪರಿಣಾಮ ವಿದ್ಯಾರ್ಥಿನಿ ಶ್ರೀದೇವಿ ಕಾಲಿನ ಬೆರಳು ಕಟ್ ಆಗಿರೋದಾಗಿ ತಿಳಿದು ಬಂದಿದೆ. ಘಟನೆ ಸಂಭವಿಸಿದ ಕೂಡಲೆ ವಿದ್ಯಾರ್ಥಿನಿಯನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡದರೂ, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀದೇವಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ (RIMS Hospital) ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಾಲೆಯ ಮೇಲ್ಛಾವಣಿ ಕುಸಿಯೋ ಹಂತದಲ್ಲಿದ್ದರೂ ಅದರಲ್ಲೇ ದೇವದುರ್ಗದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ದಿನ ಜೀವ ಭಯದಲ್ಲಿ ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]