This is the title of the web page
This is the title of the web page
Politics NewsState News

ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ: ಶಾಂತಿಯುತ ಮತದಾನ


K2kannadanews.in

Election news ರಾಯಚೂರು : 2023ರ ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ (Byelection) ಹಿನ್ನಲೆಯಲ್ಲಿ ಡಿ.27ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಯಚೂರು(Raichur) ನಗರಸಭೆ, ಸಿಂಧನೂರು ನಗರಸಭೆ(City municipal), ಹಾಗೂ ದೇವದುರ್ಗ (Devadurga) ಪುರಸಭೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ (pics full voting) ಜರುಗಿತು.

ರಾಯಚೂರು ನಗರದ ಮತಗಟ್ಟೆಗೆ ಅಪರ ಜಿಲ್ಲಾಧಿಕಾರಿ (ADC) ಡಾ.ಕೆ.ಆರ್ ದುರುಗೇಶ ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆಗಳು ಮತ್ತು ಯಾವುದೇ ಲೋಪದೋಷಗಳಾಗದಂತೆ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಒಟ್ಟು 5 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5528 ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 1633 ಹಾಗೂ ಮಹಿಳಾ ಮತದಾರರು 1511 ಸೇರಿ ಒಟ್ಟು 3144 ಮತದಾರರು ಮತದಾನ ಮಾಡಿದರು ಶೇ.56.87ರಷ್ಟು ಮತದಾನ ರಾಯಚೂರು ನಗರದ ವಾರ್ಡ್ ನಂ.12ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದೆ.

ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.22ರ 22 ಹಾಗೂ 22(ಎ) ಒಟ್ಟು 2 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 1704 ಮತದಾರರಿದ್ದು, ಇದರಲ್ಲಿ 576 ಪುರುಷ ಮತದಾರರು ಹಾಗೂ 574 ಮಹಿಳಾ ಮತದಾರರು ಸೇರಿ ಒಟ್ಟು 1150 ಮತದಾರರು ಮತದಾನ ಮಾಡಿದರು ಶೇ.67.48ರಷ್ಟು ಮತದಾನ ಸಿಂಧನೂರು ನಗರದ ವಾರ್ಡ್ ನಂ.22ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದೆ.

ದೇವದುರ್ಗ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.5 ರ ಉಪಚುನಾವಣೆಯಲ್ಲಿ ಒಟ್ಟು 1048 ಮತದಾರರಿದ್ದು, ಇದರಲ್ಲಿ 398 ಪುರುಷ ಮತದಾರರು ಹಾಗೂ 386 ಮಹಿಳಾ ಮತದಾರರು ಸೇರಿ ಒಟ್ಟು 784 ಮತದಾರರು ಮತದಾನ ಮಾಡಿದರು ಶೇ. 74.81ರಷ್ಟು ಮತದಾನ ದೇವದುರ್ಗ ಪುರಸಭೆಯ ವಾರ್ಡ್ ನಂ. ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದೆ.


[ays_poll id=3]