
K2 ಕ್ರೈಂ ನ್ಯೂಸ್ : ಪ್ರಸ್ತುತ ದಿನಗಳಲ್ಲಿ ಸಾಲ ಕೊಡೋದು ತಪ್ಪು ಪಡೆಯುವುದು ತಪ್ಪು. ಸಾಲ ಸಂಬಂಧ ಕೇಳಿಸುತ್ತೆ ಅನ್ನೋ ಮಾತು ಕೂಡ ಸತ್ಯ ಅನ್ನೋ ರೀತಿಯಲ್ಲಿ ಘಟನೆಯೊಂದು ನಡೆದಿದೆ. ಕೊಟ್ಟ ಹಣ ಮರಳಿ ಕೇಳಿದಕ್ಕೆ ಸಾಲ ಪಡೆದ ವ್ಯಕ್ತಿ ಸಾಲಕೊಟ್ಟವನ ಹಲ್ಲು ಮುರಿದ ವಿಚಿತ್ರ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಸೈಯ್ಯದ್ ಎಂಬಾತ ವೆಂಕಟೇಶ್ ಬಿಲಗುಂದಿ ಅವರು ಸಂಬಂಧಿ ದತ್ತಾತ್ರೆಯ ಬಿಲಗುಂದಿ ಎಂಬಾತನಿಗೆ ಮನೆ ಕಟ್ಟಲು ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ 50 ಸಾವಿರ ರೂಪಾಯಿಗಳನ್ನು ಆರು ವರ್ಷಗಳ ಹಿಂದೆ ಸಾಲವಾಗಿ ನೀಡಿದ್ದರು. ಹಣ ಕೊಟ್ಟು ಬಹಳ ದಿನಗಳಾದುದ್ದರಿಂದ ಹಣ ಮರಳಿ ಕೊಡುವಂತೆ ವೆಂಕಟೇಶ್ ಅವರು ದತ್ತಾತ್ರೇಯ ಅವರನ್ನು ಕೇಳಿದ್ದಾರೆ. ಆಗ ದತ್ತಾತ್ರೇಯ ಕುಪಿತನಾಗಿ ಅವಾಚ್ಯವಾಗಿ ಬೈಯ್ದು ನನ್ನ ಬಳಿ ಹಣ ಇದ್ದಾಗ ಕೊಡುತ್ತೇನೆ ಎಂದು ಹೇಳಿ ಕಲ್ಲಿನಿಂದ ಜೋರಾಗಿ ವೆಂಕಟೇಶ್‍ಗೆ ಹೊಡೆದಿದ್ದರಿಂದ ಕಲ್ಲು ಮುಖಕ್ಕೆ ಬಡಿದು ಮುಂದುಗಡೆಯ ಒಂದು ಹಲ್ಲು ಮುರಿದಿದೆ. ಇದಲ್ಲದೆ ಇನ್ನೊಮ್ಮೆ ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದಾನೆ.
ಕೊಟ್ಟ ಹಣ ಮರಳಿ ಕೇಳಿದಕ್ಕೆ ಅವಾಚ್ಯಶಬ್ಧಗಳಿಂದ ಬೈಯ್ದು ಕಲ್ಲಿನಿಂದ ಹೊಡೆದು ಗಾಯಮಾಡಿ ಒಂದು ಹಲ್ಲು ಮುರಿದು ಪರಾರಿಯಾಗಿರುವ ದತ್ತಾತ್ರೇಯ ಬಿಲಗುಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ವೆಂಕಟೇಶ್ ಬಿಲಗುಂದಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಬ್ ಅರ್ಬನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]